ಕೂಷ್ಮಾಂಡ ಕವಚ ವೃತ್ತದಿ ಅರಳಿರುವ ಕಿರಣಗಳು
ಬೀಜಗಳ ಜೋಡಿಸಲು ಹೊಮ್ಮಿರುವ ಗರಿಗಳು
ನಡುವಿನ ಒಳತಿರುಳಲಿ ಸಿಪ್ಪೆಯ ಪಂಚ ಬೊಟ್ಟುಗಳು
ಮಿನುಗಿವೆ ಕಾವ್ಯ ಚಿತ್ತಾರದಿ ಕುಂಬಳದ ಪಕಳೆಗಳು
ವಿಜಯ ದಶಮಿಯ ಆಯುಧ ಪೂಜೆಯ ಸಡಗರದಲಿ
ವೈಭವದಿ ಮೆರೆದೆ ನೀ ಕೆಂಪು ವರ್ಣ ಮಿಶ್ರಣದಲಿ
ಭಕ್ತರ ಸಂಕಷ್ಟಗಳ ನಿವಾರಣೆಗೆ ಶುಭವ ಹಾರೈಸುತಲಿ
ಸಂತೈಸಿ ಕಾಪಿಟ್ಟ ನಿನಗೆ ನಮಿಸುವೆ ಸುಪ್ರಭಾತದಲಿ.
- ಲಲಿತಾ ಕೆ ಆಚಾರ್, ಬೆಂಗಳೂರು




















