ಎಸ್ ಪಿ ಬಾಲಸುಬ್ರಮ್ಮಣ್ಯಂ ಮತ್ತು ಜ್ಯೂಲಿ ಲಕ್ಷ್ಮೀ ಅಭಿನಯದ “ಮಿಥುನಂ ನ “ಕನ್ನಡದ ಆವೃತ್ತಿ ಬಿಡುಗಡೆಗೆ ಸಜ್ಜಾಗುತ್ತಿದ್ದು ಗಾಂಧಿನಗರದ ಜನಗಳ ಗಮನ ಸೆಳೆದಿದೆ. ಜೂನ್ ಮಾಹೆಯ 4ರಂದು ಎಸ್ ಪಿ ಬಾಲಸುಬ್ರಮ್ಹಣ್ಯಂ ಅವರ ಜನ್ಮದಿನೋತ್ಸವ ಆದ್ದರಿಂದ ಇದೇ ವಾರದಲ್ಲಿ ವಿಶೇಷವಾಗಿ ಬಿಡುಗಡೆಯಾಗುತ್ತಿರುವುದು ಗಮನಾರ್ಹ.
ನಮ್ಮ ಭಾರತ ದೇಶದ ಗಾಯಕರುಗಳ ಸಾಲಿನಲ್ಲಿ ಅತ್ಯುತ್ತಮ ಗಾಯಕರುಗಳ ಪಟ್ಟಿಯಲ್ಲಿ ದೇಶ ಕಂಡ ಮಹಾನ್ ಗಾಯಕರುಗಳಲ್ಲಿ ಇವರು ಸಹ ಅಗ್ರಜರು. ಇದು ಸಾಮಾನ್ಯ ವಿಷಯವೇನಲ್ಲ. ಈ ಸುಸ್ವರ ಮಾಂತ್ರಿಕರ ನಟನೆಯೂ ಅಷ್ಟೇ ಶ್ಲಾಷನೀಯವು ಹೌದು. ಮೇರು ನಟರ ಸಾಲಿಗೆ ಈ ದಿಗ್ಗಜ ನಟರಿರುವುದು ಸ್ತುತ್ಯಾರ್ಹ, ಸ್ವರ ಮಾಂತ್ರಿಕರು ಬಣ್ಣವನ್ನು ಹಚ್ಚಿದ ಕಡೆಯ ಚಿತ್ರ ತೆಲುಗಿನ ಮಿಥುನಂಇದನ್ನು ಇದನ್ನು ತನಿಕೆಳ್ಳ ಭರಣಿಖ್ಯಾತ ತೆಲುಗಿನ ಹೆಸರಾಂತ ನಿರ್ದೇಶಕರುಜೂನ್ 5 ರಂದು ಇದರ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವರು.
ಮಧುಸೂದನ ಹವಾಲ್ದಾರ ಮತ್ತು ತ್ರಿವಿಕ್ರಮಜೋಶಿ ಇವರು ಹರಿದಾಸ ನಿರ್ದೇಶಕರೆಂದೇ ಪ್ರತೀತಿಗೊಂಡವರು. ಇದರ ಟೀಸರ್ ಬಿಡುಗಡೆಗೊಂಡು ಪೂರ್ವಭಾವಿ ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿರುವುದು. ಶ್ರೀದೇವಿ ಶ್ರೀನಿವಾಸ್ಅವರು ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಧುಸೂದನ್ ರವರು ನನಗೆ ತಣಿವೆಣ್ಣಿಪರಿಚಯಸ್ಥರು ಅವರನ್ನು ರೈಟ್ಸ್ ಕೇಳಿದಾಗ ನಿರ್ಮಾಪಕರನ್ನು ಕೇಳಲು ತಿಳಿಸಿದ್ದರು. ನಿರ್ಮಾಪಕರು ನಾನು ಕೇಳಿದಾಗಸಂತೋಷದಿಂದ ನನಗೆ ಕೊಟ್ಟರುಮತ್ತು ಎಸ್ ಪಿ ಬಿ ಅವರ ಧ್ವನಿಗೆ ಯಾವುದೇ ತರಹದ ಧಕ್ಕೆ ಉಂಟಾಗದಂತೆ ಚಿತ್ರವನ್ನು ನಿರ್ಮಾಪಣೆ ಮಾಡಬೇಕು ಇದು ನಿಮ್ಮ ಜವಾಬ್ದಾರಿ ಎಂದು ನನಗೆ ತಿಳಿಸಿದರು. ಚಿಕ್ಕಬಳ್ಳಾಪುರದರಾಜು ಅವರು ಸಂಗೀತದ ಜವಾಬ್ದಾರಿಯನ್ನು ಹೊತ್ತುಕೊಂಡರು.
ಗೋಪಿ ಸೌಂಡ್ ಆಫ್ ಮ್ಯೂಸಿಕ್ ನ ಸುಧೀಂದ್ರ ವೆಂಕಟೇಶ್ ಗುರುರಾಜ್ ಶ್ರೀದೇವಿ ಶ್ರೀನಿವಾಸ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರತಕ್ಕಂತಹ ಸುಂದರ್ ರಾಜ್ ಅವರು ಅತಿಥಿಗಳಾಗಿಯೂ ಮತ್ತು ಸಕಲ ಸಿದ್ಧತೆಗಳಿಗೂ ಸಂಪೂರ್ಣ ಸಹಕಾರವನ್ನು ಕೊಟ್ಟು ಉಪಸ್ಥಿತರಾಗಿದ್ದರು. ಎಸ್ ಪಿ ಬಿ ಯವರ ಆಪ್ತರಾಗಿದ್ದ ಶ್ರೀ ಗೋಪಿ ಯವರು ಎಸ್ ಪಿ ಬಿ ಯವರನ್ನು ಸ್ಮರಿಸಿದರು.
ಮುಖ್ಯ ಪಾತ್ರದಲ್ಲಿ ಎಸ್ ಪಿ ಬಿ ಮತ್ತು ಜ್ಯೂಲಿ ಲಕ್ಷ್ಮೀ ಇದು 2012 ರಲ್ಲಿ ತೆಲುಗಿನಲ್ಲಿನ ಈ ಚಿತ್ರದ ಹಾಡು ಆವಕಾಯ ಅಂದರಿಕಿ ಈ ಹಾಡು ಎಸ್ ಪ ಬಿ ಯವರ ಕಂಠಕ್ಕೆ ಮಾರುಹೋಗದವರಿಲ್ಲ ಈ ಹಾಡು ದೊಡ್ಡ ಹಿಟ್ ಕಂಡಿತ್ತು. ಈ ಚಿತ್ರಕ್ಕೆ ನಾಲ್ಕು ನಂದಿ ಪ್ರಶಸ್ತಿಗಳು ಬಂದಿದ್ದವು.
ವಿಶೇಷ ತೀರ್ಪುಗಾರರ ಪ್ರಶಸ್ತಿ ಲಕ್ಷೀಯವರಿಗೆ ಬಂದಿತ್ತು. ತನಿಕೇಳ್ಳ ಭರಣಿಯವರು ಬರೆದು ನಿರ್ದೇಶಿಸಿದ್ದರು ಚಿತ್ರವನ್ನು . ಶ್ರಿರಮಣರ ಆಧಾರಿತ ಕಾದಂಬರಿ ಚಿತ್ರವಿದು ಆನಂದ್ ಮಯಿಡಾ ಚಿತ್ರ ನಿರ್ಮಿಸಿದ್ದಾರೆ ಲಕ್ಷ್ಮೀಎಸ್ ಪಿ ಬಿಯವರ ಸುತ್ತಲೂ ಚಿತ್ರಕಥೆ ಸುತ್ತುವರೆದು ಕಡೆ ಯಾಗುತ್ತದೆ ಕಥೆ ಮೋಹನ ಕ್ರಷ್ಣ ಇಂದ್ರ ಗಂಥಿ ಧ್ವನಿ ನೀಡಿದ್ದಾರೆ ಸಂಗೀತ ಸ್ವರವೀಣಾ ಪಾಣಿ ಇದಕ್ಕೆ ಅತ್ಯುತ್ತಮ ಸಂಭಾಷಣಾ ಪ್ರಶಸ್ತಿ ತನಿಕೇಳ್ಳ ಭರಣಿಯುವರಿಗೆ ಬಂದಿತ್ತು 1967ರಲ್ಲಿನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಎಸ್ಪಿಬಿಯವರು ಹಾಡಲು ಶುರು ಮಾಡಿದ ಎಷ್ಟೋ ಜನರಿಗೆ ಅವರ ಕಂಠದ ಸಿರಿಯಲ್ಲಿ ಹಾಡುಗಳನ್ನು ಹಾಡಿರುವುದು ನಾವು ಎಂದಿಗೂ ಮರೆಯುವಂತಿಲ್ಲ. ಮೂರು ತಲೆಮಾರಿನವರಿಗೂ ಇವರ ಕಂಠಸಿರಿ ನಟರ ನಿಕಟತೆಯಲ್ಲಿ ಮೇಳೈಸಿದೆ .79 ಸುಮಾರು ಚಿತ್ರಗಳಲ್ಲಿ ಇವರ ನಟನಾ ಕೌಶಲ್ಯವನ್ನು ಜನರಿಗಿತ್ತ ಅದಮ್ಯ ಚೇತನ ಎನ್ನೋಣವೇ ಅಥವಾ ನಮ್ಮ ಎಸ್ ಪಿ ಬಿ ಯವರನ್ನು ಮತ್ತು ಅವರ ನಟನಾ ಶೈಲಿಯನ್ನು ನಮಗೆ ಭಿತ್ತರಿಸುತ್ತಿರುವ ಅವರನ್ನು ಜೀವಂತವಾಗಿರುವ ಚೈತನ್ಯದ ನಟನಾ ಬುಗ್ಗೆ ಎಂಬುದು ನನ್ನ ಅಂಬೋಣ.
✍️ ಸತ್ಯಪ್ರಿಯಸುತೆ ಜೈಪುರ್ ರಾಜಾಸ್ತಾನ್




















