ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ರೈತರ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ.”

ಯಾದಗಿರಿ ಮತಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಶಾಸಕರ ನಿರ್ಲಕ್ಷ್ಯವನ್ನು ವಿರೋಧಿಸಿ ಯಾದಗಿರಿ ನಗರಸಭೆ ಕಾರ್ಯಾಲಯದ ಮುಂಭಾಗ ನಡೆಸಿದ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಭಾಗವಹಿಸಿ ಮಾತನಾಡಿ ಈ ಹೋರಾಟ ನಿರಂತರವಾಗಿರಲಿದ್ದು, ಸಾರ್ವಜನಿಕರ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಡಳಿತ ಭವನಕ್ಕೂ ಮುತ್ತಿಗೆ ಹಾಕಲು ಸಜ್ಜಾಗುತ್ತೇವೆ. ನನ್ನ ಜನಸೇವೆ ಕ್ಷೇತ್ರದ ಜನರಿಗೋಸ್ಕರ ಹಗಲಿರಳೂ ಲಭ್ಯವಿರುತ್ತದೆ. ಸಾರ್ವಜನಿಕರ ಸಂಪರ್ಕಕ್ಕೆ ಮತ್ತು ಸೇವೆಗೆ ನಾನು ಸದಾ ಸಿದ್ದ ಎಂದು ಗುಡುಗಿದರು.

ಕ್ಷೇತ್ರದಲ್ಲಿನ ಶುದ್ದ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು, ಬೀದಿ ದೀಪದ ಸಮಸ್ಯೆ, ಒಳಚರಂಡಿ ಅವ್ಯವಸ್ಥೆಯನ್ನು ಸರಿಪಡಿಸದ ಶಾಸಕರು ಮತ್ತು ಅವರು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಗೂ ಮುನ್ನ ಯಾದಗಿರಿಯ ಮೈಲಾಪೂರ ಅಗಸಿಯಿಂದ ನಗರಸಭೆ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ರಾಜಾ ಅಮರೇಶ್ವರ ನಾಯಕ್, ಶ್ರೀ ಉಮೇಶ್ ಜಾಧವ್, ಜಿಲ್ಲಾ ಪ್ರಭಾರಿಗಳಾದ ಶ್ರೀ ಶರಣಪ್ಪ ತಳವಾರ, ಹಿರಿಯ ಮುಖಂಡರಾದ ಶ್ರೀ ರಾಚನಗೌಡ ಮುದ್ನಾಳ, ಶ್ರೀ ಸದಾಶಿವಪ್ಪ ರೊಟ್ನಡಗಿ, ಶ್ರೀ ಸಿದ್ದಣ್ಣಗೌಡ ವಡಿಗೇರಾ, ಶ್ರೀ ಮಲ್ಲಣ್ಣಗೌಡ ಹತ್ತಿಕುಣಿ, ಶ್ರೀ ಶರಣಗೌಡ ಮುದ್ನಾಳ, ಶ್ರೀ ಮಾಹದೇವಪ್ಪ ಯಲಸತ್ತಿ, ಶ್ರೀ ಶರಣಗೌಡ ಬಾಡಿಯಾಳ, ಶ್ರೀ ಖಂಡಪ್ಪ ದಾಸನ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪರಶುರಾಮ ಕುರುಕುಂದಿ, ನಗರ ಮಂಡಲ ಅಧ್ಯಕ್ಷರಾದ ಶ್ರೀ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ರಾಜಶೇಖರ ವಡಿಗೇರಾ, ಶ್ರೀಮತಿ ನಾಗರತ್ನ ಕುಪ್ಪಿ, ಡಾ. ಶರಣಭೂಪಲರೆಡ್ಡಿ ನಾಯ್ಕಲ್, ಶ್ರೀ ದೇವಿಂದ್ರನಾಥ ನಾದ್, ಶ್ರೀ ಸಿದ್ದಪ್ಪ ಹೊಟ್ಟಿ, ಶ್ರೀ ವಿಲಾಸ ಪಾಟೀಲ್, ಶ್ರೀ ವೆಂಕಟರೆಡ್ಡಿ ಅಬ್ಬೇತುಮಕೂರ, ವಕ್ತಾರ ಶ್ರೀ ಹಣಮಂತ ಇಟಗಿ ಸೇರಿದಂತೆ ನೂರಾರು ಮುಖಂಡರು, ಸಾವಿರಾರು ಕಾರ್ಯಕರ್ತರು, ಮಹಿಳೆಯರು ಮತ್ತು ಯುವಕರು ಪಾಲ್ಗೊಂಡಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!