ಯಾದಗಿರಿ : ಮಾದಿಗ ದಂಡೋರ MRPS ಜಿಲ್ಲಾ ಸಮಿತಿ ವತಿಯಿಂದ ದಿ. 25-05-2026ದಂದು ಹಳೆಯ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು. ಯಾದಗಿರಿ ಜಿಲ್ಲೆಯ 6 ತಾಲೂಕುಗಳ ಅಧ್ಯಕ್ಷರುಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳೊಂದಿಗೆ ಸಂಘಟನೆ ಯಾವ ರೀತಿಯ ಕಾರ್ಯ ವೈಖರಿಯಿಂದ ನಡೆಯಬೇಕು ಎಂದು ಚಿಂತನ ಮಂಥನ ಮತ್ತು ಕುಂದು ಕೊರತೆಗಳ ಸಭೆ ಬಹಳ ಅಚ್ಚುಕಟ್ಟಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮುಂದಿನ ಹೋರಾಟದ ಬಗ್ಗೆ ರಾಜ್ಯ ಉಪಾಧ್ಯಕ್ಷರಾದ ಶ್ರೀ ಗಣೇಶ ದುಪ್ಪಲ್ಲಿ ಮಾತನಾಡಿ ಮತ್ತು ಒಳ ಮೀಸಲಾತಿಯ ಮುಂದಿನ ಹಂತದ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಕಾಶಪ್ಪ ಮಾದಿಗ ಅವರು ಮುಂದಿನ ತಯಾರು ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಾನ ಅಲಂಕರಿಸಿದ ಶ್ರೀಮಾನ್ ಖಂಡಪ್ಪ ದಾಸನ ಅವರು ಸಹ ತಮ್ಮ ಹೋರಾಟದ ನಡೆಯನ್ನು ಯುವ ಮಿತ್ರರಿಗೆ ಹುರಿದುಂಬಿಸಿದರು. ಹಾಗೆಯೇ ಉದ್ಯಮಿಗಳು ಸಮಾಜದ ಮುಖಂಡರಾದ ವಿಜಯ್ ಕುಮಾರ್ ಕಡೆಚೂರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ನಂತರದಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಯನ್ನಾಗಿ ಶ್ರೀ ಭೀಮರಾಯ ಸಾತನೂರು ಇವರನ್ನು ನೇಮಕ ಮಾಡಲಾಯಿತು. ಅದೇ ರೀತಿಯಾಗಿ ಶಹಾಪುರ ತಾಲೂಕಿನ ಅಧ್ಯಕ್ಷರನ್ನಾಗಿ ಪರಶುರಾಮ ಪೂಜಾರಿ ಇವರನ್ನು ಸಹ ನೇಮಕ ಮಾಡಲಾಯಿತು. ಮುಂಬರುವ ಹೋರಾಟ ಮತ್ತು ಜನಜಾಗೃತಿ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಜಿಲ್ಲಾಧ್ಯಕ್ಷರಿಂದ ನೇಮಕ ಮಾಡಿ ಆದೇಶಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಮುಂಡರಗಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಮೇತ್ರಿ ಕಡೆಚೂರು ಮತ್ತು ಯಾದಗಿರಿ ತಾಲೂಕಿನ ಅಧ್ಯಕ್ಷರಾದ ಅನಿಲ್ ಕುಮಾರ್ ದಾಸನಕೇರಿ,ಗುರುಮಿಠಕಲ್ ತಾಲೂಕ ಅಧ್ಯಕ್ಷರಾದ ರವಿಕುಮಾರ್, ವಡಗೇರ ತಾಲೂಕ ಅಧ್ಯಕ್ಷ ಶರಣಪ್ಪ ವಡಗೇರ,
ವಡಗೇರ ತಾಲೂಕು ಉಪಾಧ್ಯಕ್ಷ ತಿಪ್ಪಣ್ಣ ಗೋಂದೆನೂರ,
ಯುವ ಘಟಕ ಅಧ್ಯಕ್ಷ ವಿಲ್ಸನ್ ಹಲಗೇರಿ ಮತ್ತು ಭೀಮರಾಯ ಪೂಜಾರಿ ರಸ್ತಾಪುರ,ಶರಬಣ್ಣ ರಸ್ತಾಪುರ ಕನ್ಯಾಕುಳೂರು, ಮಲ್ಲಿಕಾರ್ಜುನ ಮಳಿಕೇರಿ ಸಂಪಾದಕರು ಶಹಾಪುರ ಎಕ್ಸ್ ಪ್ರೆಸ್, ಹೊನ್ನಪ್ಪ ನಾಟೇಕಾರ. ಸಾಯಬಣ್ಣ ಕುರೀಹಾಳ. ಭೀಮಣ್ಣ ಭಂಡಾರಿ. ಪ್ರಭು. ಕುಮನೂರು ಅಧ್ಯಕ್ಷ ಮಲ್ಲು . ಅರ್ಜುನ ಹೋಬಳಿ ಅಧ್ಯಕ್ಷರು ಸೈದಾಪುರ.
ಕುರಿಹಾಳ ಗ್ರಾಮ ಘಟಕದ ಪದಾಧಿಕಾರಿಗಳು ಸಹ ಭಾಗವಹಿಸಿದ್ದರು.
ಅಯ್ಯಾಳ ಅಧ್ಯಕ್ಷ ಬಸವರಾಜ. ಭೀಮುರಾಯ ಹನಸೂರು. ಅಶೋಕ ಹಾಲಗೇರ. ನಾಗಪ್ಪ ಕನಕಲ್ ಶಾಂತಪ್ಪ ಬೆಳಗುಂದಿ. ಅಶೋಕ ಮಾದವಾರ. ರೆಡ್ಡಿ ಚಿಗನೂರು ಗ್ರಾಮ ಘಟಕ ಅಧ್ಯಕ್ಷರು. ಬಂದು ಚಿಗನೂರು ಸೇರಿದಂತೆ ಇನ್ನೂ ಅನೇಕ ಜನ ಜಿಲ್ಲೆಯ ತಾಲೂಕಿನ ಗ್ರಾಮ ಘಟಕಗಳಿಂದ ಎಂ ಆರ್ ಪಿ ಎಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















