ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲೇಶ್ವರ ಗ್ರಾಮದಲ್ಲಿ ದಿ. 26 05 .2026 ರ ಮಂಗಳವಾರದಂದು ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜೂಗೌಡ ಬ. ಪಾಟೀಲ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ವಿಜಯಪುರ 2025 – 26 ನೇ ಸಾಲಿನ ತಾಲೂಕು ಪಂಚಾಯಿತಿ ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ಮೈಲೇಶ್ವರ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಅಂದಾಜು ಮೊತ್ತ 18 ಲಕ್ಷ ರೂ. ಗಳಲ್ಲಿ ನಿರ್ಮಾಣ ಗುತ್ತಿಗೆದಾರರಾದ ಕೆ.ಆರ್. ಐ.ಡಿ.ಎಲ್. ಬಸವನಬಾಗೇವಾಡಿ ಯವರ ನೇತೃತ್ವದಲ್ಲಿ ಅಂಗನವಾಡಿ ಭೂಮಿ ಪೂಜಾ ಕಾರ್ಯಕ್ರಮವನ್ನು ಗ್ರಾಮದ ಪೂಜ್ಯರಾದ ಬಸಯ್ಯ ಹಿರೇಮಠ, ಮಲ್ಲಯ್ಯ ಸಿದ್ದರಾಮಯ್ಯ ಮಠಪತಿ, ಪ್ರಭುಲಿಂಗ ಮಠಪತಿ , ಕಾಂಗ್ರೆಸ್ ಪಕ್ಷ ಧುರೀಣರಾದ ಎಸ್ ಐ ಚೌದರಿ, ನಿವೃತ್ತ ದೈಹಿಕ ಶಿಕ್ಷಕರಾದ ಬಾಳಸಾಬ ಸಿ. ಕೋರಿ, ಎನ್ ಎಸ್ ಕುಳಗೇರಿ, ತಾಳಿಕೋಟೆ ತಾಲೂಕ ಘಟಕದ ಜೆಡಿಎಸ್ ಅಧ್ಯಕ್ಷರಾದ ಮಡು ಸೌಕಾರ, ಗುತ್ತಿಗೆದಾರರಾದ ನಿಂಗನಗೌಡ ಬಿರಾದರ್ ಅಗ್ನಿ, ಎಸ್ ಎಸ್ ಚೌಧರಿ, ಶರಣು ಬ. ದೇಸಾಯಿ ಸೇರಿದಂತೆ ಗ್ರಾಮದ ಗುರುಹಿರಿಯರು ಕೂಡಿಕೊಂಡು ಅಂಗನವಾಡಿ ಕಟ್ಟಡ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.


ಇದೇ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಜಯಪುರ 2025 -26 ನೇ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಅಂದಾಜು ಮೊತ್ತ 50 ಲಕ್ಷ ರೂ. ಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಪೂಜೆಯನ್ನು ಸ್ಥಳೀಯ ಶಾಸಕರು, ಪೂಜ್ಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ತಾಳಿಕೋಟೆ ಮಾಜಿ ಅಧ್ಯಕ್ಷರುಗಳಾದ ಎಸ್ ಬಿ ಇಲಕಲ್, ಜೆಡಿಎಸ್ ಧುರೀಣರಾದ ಎಸ್ ಎಸ್ ಕುಳಗೇರಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಉಮೇಶ್ ಎಸ್ ಬೂದಿಹಾಳ, ಅಪ್ಪು ಬ. ಕುಳಗೇರಿ ,ಶ್ರೀಮತಿ ರೇಣುಕಾ ಸಂಗನಗೌಡ ಬಿರಾದಾರ ಅಂಗನವಾಡಿ ಕಾರ್ಯಕರ್ತೆ ತಾಳಿಕೋಟೆ ,ಪಿಡಬ್ಲ್ಯೂಡಿ ಮೈಲ ಕೂಲಿ ನಿವೃತ್ತ ಕಾರ್ಮಿಕರಾದ ಯಮನಪ್ಪ ಮಲಕಪ್ಪ ದೊಡ್ಡಮನಿ, ಹಾಗೂ ಜೆಡಿಎಸ್ ಕಾರ್ಯಕರ್ತರು ಸಿ.ಸಿ ರಸ್ತೆ ಪೂಜಾ ಕಾರ್ಯಕ್ರಮವನ್ನು ನೆರೆವೇರಿಸಿದರು.
ಇವೆರಡೂ ಪೂಜಾ ಕಾರ್ಯಕ್ರಮಗಳ ನಂತರ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ಬಸಯ್ಯ ಹಿರೇಮಠ ವಹಿಸಿದ್ದರು.
ಅಧ್ಯಕ್ಷತೆಯನ್ನು ಶಾಸಕರಾದ ರಾಜುಗೌಡ ಬ. ಪಾಟೀಲ ವಹಿಸಿದ್ದರು.ಇವರೊಂದಿಗೆ ಮುಖ್ಯ ಅತಿಥಿಗಳಾಗಿ ಗ್ರಾಮದ ಹಿರಿಯರಾದ ಎಸ್ ಐ ಚೌದರಿ, ಬ. ಸಾಲವಾಡಗಿ ಮಾಜಿ ಅಧ್ಯಕ್ಷರಾದ ಮಲ್ಲನಗೌಡ ಪೊಲೀಸ್ ಪಾಟೀಲ, ಶಳ್ಳಗಿ ದೇಸಾಯಿ, ಹಾಗೂ ಸುತ್ತಮುತ್ತಲಿನ ರಾಜಕೀಯ ಧುರೀಣರು ವೇದಿಕೆಯನ್ನು ಹಂಚಿಕೊಂಡಿದ್ದರು.
ಈ ಕಾರ್ಯಕ್ರಮದ ಸ್ವಾಗತವನ್ನು ನಾಗಣ್ಣ ಅಂಬ್ರಪ್ಪ ದೇಸಾಯಿ, ಪೋಸ್ಟ್ ಮಾಸ್ಟರ್ ಮಲ್ಲೇಶ್ವರ ಸ್ವಾಗತ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ತಾಳಿಕೋಟೆ ತಾಲೂಕ ಘಟಕದ ಜೆಡಿಎಸ್ ಅಧ್ಯಕ್ಷರಾದ ಮಡು ಸೌಕಾರ್ ಈ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶಾಸಕರು ಈ ಸಭೆಯನ್ನು ಉದ್ದೇಶಿಸಿ ಗ್ರಾಮದ ಬೇಡಿಕೆಗಳಾದ ಮಾರುತಿ ದೇವಸ್ಥಾನಕ್ಕೆ ತಮ್ಮ ಅನುದಾನದಲ್ಲಿ 5 ಲಕ್ಷಗಳನ್ನು ಹಾಗೂ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ 5 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರಲ್ಲಿ ಮಾರುತಿ ದೇವಸ್ಥಾನಕ್ಕೆ ಈಗಾಗಲೇ ಕೊಟ್ಟಿದ್ದು ಮುಂಬರುವ ದಿನಮಾನಗಳಲ್ಲಿ 5 ಲಕ್ಷ ರೂ.ಗಳನ್ನು ಬಸವೇಶ್ವರ ಕಲ್ಯಾಣ ಮಂಟಪಕ್ಕೆ ತಮ್ಮ ಅನುದಾನದಲ್ಲಿ ಮಂಜೂರು ಮಾಡುತ್ತೇನೆಂದು ಹೇಳಿ ತಮ್ಮ ಅಧ್ಯಕ್ಷೀಯ ಭಾಷಣವನ್ನು ಮುಕ್ತಾಯಗೊಳಿಸಿದರು.

ವರದಿಗಾರರು ಸಂಗಮೇಶ ಸಿ. ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!