ಸೊರಗಿದ್ದ ಕೆಂಬಣ್ಣದ ದಾಸವಾಳವ ಕತ್ತರಿಸಲು
ಪುಟ್ಟ ಶ್ವೇತ ತುಂಬೆಯ ನಡುವಲಿ ಜೋಡಿಸಲು
ಸುತ್ತ ಹಸಿರೆಲೆಗಳ ಅಲಂಕಾರಿಕವಾಗಿ ಇರಿಸಲು
ಕಾವ್ಯದಾ ಸಾಲುಗಳಲಿ ಸುಲಲಿತ ಚಿತ್ತಾರವಾಗಿಸಲು
ಹಗುರಾಯಿತು ಎನ್ಮನದ ಕ್ರಿಯಾಶೀಲ ತುಡಿತವು
ಹರುಷವ ಹಂಚಿಕೊಳ್ಳಲು ಸಂತೃಪ್ತ ಸಮಾಧಾನವು
ತಮಗಿದೊ ನಲ್ಮೆಯ ಒಲ್ಮೆಯ ಶುಭೋದಯವು
ಪ್ರೋತ್ಸಾಹಕ ನಿತ್ಯಾಭಿಮಾನಿಗಳಿಗಿದು ಅರ್ಪಿತವು
- ಲಲಿತಾ ಕೆ ಆಚಾರ್, ಬೆಂಗಳೂರು




















