ಬಾಗಿ ತೂಗುವ ಹೂಗೊಂಚಲಲಿ ಅರಳಿದ್ದವು
ಹಸಿರೆಲೆಗಳ ಮಧ್ಯದಲಿ ಕೇಸರಿ ರಂಗಿನವು
ನಡುವೆ ಸೇರಿಸೆ ನೇರಳೆ ಹಣ್ಣಿನ ಕುಸುಮವು
ಬಿಂಬಿಸಿದೆ ಜೊತೆಯಲಿ ತುಂಬೆಯ ಸಿಂಗಾರವು
ಕ್ರಿಯಾಶೀಲತೆಯಲಿ ಮೂಡಿತು ಸುಲಲಿತ ಚಿತ್ತಾರವು
ಸಾಹಿತ್ಯ ಪ್ರೇಮಿಗಳಿಗೊಂದು ಲಘು ಕಾವ್ಯವು
ಸುಮನಗಳಲ್ಲಿಗೆ ಬರಲು ಆಗಿದೆ ನಲ್ಮುಂಜಾವು
ಆಸ್ವಾದಿಸುತ ಸಾಗಲು ನವ ನವೋಲ್ಲಾಸವು
- ಲಲಿತಾ ಕೆ ಆಚಾರ್ ಬೆಂಗಳೂರು




















