ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್ ಪುನರ್ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ 21 ನೆಯ ದಿನವಾದ ಮಂಗಳವಾರ ಕೂಡಾ ಮುಂದುವರೆಯಿತು.
21 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದರೂ ಧರಣಿ ನಿರತ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಲು ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಈ ಅನಿರ್ದಿಷ್ಟಾವಧಿ ಧರಣಿಯನ್ನು ತೀವ್ರ ಸ್ವರೂಪಗೊಳಿಸಿ ಸರ್ಕಾರ ಮತ್ತು ಅಧಿಕಾರಿಗಳ ಕಣ್ತಿರಿಸಬೇಕೆಂದು ಸೋಮವಾರ ರಾತ್ರಿಯ 10 ಗಂಟೆಯವರೆಗೆ ಹೋರಾಟ ನಡೆಸುವ ಮೂಲಕ ಮುಂದಿನ ನಮ್ಮ ಹೋರಾಟ ಯಾವ ರೀತಿ ಇರಬೇಕು. ಕಳೆದ 18 ವರ್ಷಗಳಿಂದ ನಮ್ಮ ಕಷ್ಟ ಸಂಕಷ್ಟಗಳನ್ನು ಕೇಳಿಯೂ ಕೂಡಾ ಕೈಕಟ್ಟಿ ಕುಳಿತಿರುವ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಂದ ಬೇಡಿಕೆಗಳನ್ನು ಹೇಗೆ ಈಡೇರಿಸಿಕೊಳ್ಳಬೇಕೆನ್ನುವುದರ ಕುರಿತು ಸುದೀರ್ಘ ಚರ್ಚೆಯನ್ನು ಮಾಡಿದ್ದಲ್ಲದೆ. ಇದ್ದಲಗಿ ಗ್ರಾಮದ ಜೊತೆಗೆ ಮುಳುಗಡೆಯಾದ ಇನ್ನುಳಿದ 9 ಗ್ರಾಮಗಳ ಜನರನ್ನು ಕೂಡಾ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಮಾಡಬೇಕು ಎನ್ನುವ ಚರ್ಚೆಯನ್ನು ಮಾಡಲಾಗಿದೆ.ಇದಕ್ಕೆ ಪೂರಕವಾಗಿ ಮಂಗಳವಾರ ಸಾಯಂಕಾಲ 6:30 ಗಂಟೆಗೆ ಗ್ರಾಮದ ಎಲ್ಲ ಸಂತ್ರಸ್ತರನ್ನು ಸೇರಿಸಿ ಧರಣಿಯ ಮುಂದಿನ ರೂಪರೇಷೆಗಳ ಚರ್ಚೆಯನ್ನು ಕೂಡಾ ಮಾಡಲಾಗಿದೆ ಎಂದು ಧರಣಿ ನಿರತ ಸಂತ್ರಸ್ತರಿಂದ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಗಿರಮಲ್ಲಪ್ಪ ಹಳಪೇಟಿ,ಭೀಮಪ್ಪ ಆಡಿಹಾಳ, ಕಲ್ಲಪ್ಪ ಆನೆಹೊಸೂರ, ಶರಣಪ್ಪ ಮುಳ್ಳೂರ,ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ,ಹುಚ್ಚಪ್ಪ ಬೂದಗೂಳಿ,ಹನಮಂತ ಹಡಪದ,ಮಹಾಂತೇಶ ವಾಲೀಕಾರ,ಇಮಾಮಸಾಬ ಹುನಗುಂದ,ಶರಣಪ್ಪ ಬೇನಾಳ,ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಮಹಾದೇವಿ ತೋಟಗೇರಿ, ನೀಲಮ್ಮ ಮಾಗಿ, ಭೀಮವ್ವ ಬೇನಾಳ,ಸಂಗವ್ವ ಹಾವರಗಿ ಸೇರಿದಂತೆ ಇತರರಿದ್ದರು.
ಸಂತ್ರಸ್ತರು ಸುಮ್ನೆ ಕುಳಿತರೇ ಹನಿ ನೀರಾವರಿ ಯೋಜನೆಯ ಗತಿ ನಮ್ಮೆಲ್ಲರಿಗೂ ಬರುತ್ತೇ ಈ ತಾತ್ಕಾಲಿಕ ಶೆಡ್ಡಿನಲ್ಲಿ ವಾಸವಾಗಿ 18 ವರ್ಷದಲ್ಲಿ ಸಾಕಷ್ಟು ನರಕಯಾತನೆಯನ್ನು ಅನುಭವಿಸಿದ್ದೇವೆ. ಇನ್ನು ಕೂಡಾ ಅನುಭವಿಸುತ್ತಾ ಇದ್ದೀವಿ. ಇದಕ್ಕೆ ಅಂತ್ಯ ಅನ್ನೋದಿಲ್ವಾ? ನಮ್ಮ ಕಣ್ಣೀರು ಕೂಳಿನ ಕಥೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅರಿತರೂ ಯಾಕೆ ನಮ್ಮ ಕೆಲಸ ಮಾಡುತ್ತಿಲ್ಲ. ಯಾಕೆ ನಮ್ಮ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುತ್ತಿಲ್ಲ. ನಾವು ಸುಮ್ಮನೇ ಕೂತರೇ ಹನಿ ನೀರಾವರಿ ಯೋಜನೆಯ ಗತಿ ನಮ್ಮೆಲ್ಲರಿಗೂ ಬರುತ್ತೇ ಬನ್ನಿ, ಒಗ್ಗೂಡೋಣ, ನಮ್ಮ ಹಕ್ಕು ಪಡೆಯೋಣ…ನಾಲ್ಕು ಗುಂಟೆ ನಿವೇಶನ, ಎರಡನೇ ಕಂತಿನ ಹಣ ನಮ್ಮೆಲ್ಲರ ಹಕ್ಕು ಅದನ್ನು ಪಡೆಯುವವರೆಗೂ ಧರಣಿ ನಿರಂತರವಾಗಿರುತ್ತೆ ಎಂದು ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್ ಪುನರ್ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
- ಕರುನಾಡ ಕಂದ ಸುದ್ದಿ




















