
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಾಡಿನ ಹಿರಿಯ ಸಾಹಿತಿಗಳು ಮಾಸ್ಕೆರಿ ಎಂ. ಕೆ. ನಾಯಕ್ ಇವರು ದಿನಾಂಕ 28. 5. 2026ರಂದು ಸಂಜೆ ಚಂದ್ರ ಚಂದುಳ್ಳಿ ಎಂಬ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ ಕವನ ಸಂಕಲನದ ಬಗ್ಗೆ ಸಂಪೂರ್ಣವಾಗಿ ಅರ್ಥವನ್ನು ಮಾಡಿಕೊಟ್ಟು ಅತಿಥಿಗಳಿಗೆ ಸನ್ಮಾನಿಸಿ ಚಂದ್ರ ಚಂದುಳ್ಳಿ ಕವನದ ಬಗ್ಗೆ ವಿಸ್ತಾರವಾಗಿ ವಿವರಣೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ಕವಿ ರವೀಂದ್ರ ಲಕ್ಷ್ಮೇಶ್ವರ, ಮುಖ್ಯ ಅತಿಥಿಗಳು ರೋಷನ್ ನೇತ್ರಾವಳಿ, ಸನ್ಮಾನಿತ ಗೌರವ ಅತಿಥಿಗಳು ದಶರಥ್ ಬಂಡಿ ವಡ್ಡರ್, ಬುದ್ಧಿವಂತ ಗೌಡ ಪಾಟೀಲ್, ತೇಜಸ್ ರಾವ್, ರಮೇಶ್ ಚಂದಾವರ, ರವಿಕುಮಾರ್ ಚವ್ಹಾಣ, ಕೃಷ್ಣ ಲಕ್ಷ್ಮೇಶ್ವರ, ಶ್ರೀನಾಥ್ ಪಸಲ್ಕರ್, ಅನಂತ್ ಪುರಾಣಿಕ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಕೆ.ಟಿ. ಮೈಸೂರು, ಪಾಲ್ಗುನಗೌಡ ಅಂಕೋಲಾ, ನಾಗರತ್ನ ಲೋಕೇಶ್ ಶಿರಸಿ, ಪ್ರವೀಣ್ ಸುಲಕೆ ದಾಂಡೇಲಿ, ಕಲ್ಪನಾ ಹೆಗಡೆ ಶಿರಸಿ, ರೇಣುಕಾ ಭಟ್, ರಾಜೇಶ್ ದಳೇಕರ್, ನರೇಶ್ ನಾಯಕ್ ದಾಂಡೇಲಿ, ಶ್ರೀಮತಿ ಎಲ್ ಎಸ್ ಎಸ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಕೆ. ಟಿ. ಮೈಸೂರು ಇವರಿಗೆ ಫಲಕ ನೀಡುವ ಮೂಲಕ ಪುರಸ್ಕರಿಸಲಾಯಿತು.
ವರದಿ ತೇಜಸ್ ರಾವ್, ದಾಂಡೇಲಿ




















