ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಹೋಬಳಿಯ ಶ್ರೀಯುತೇಶ್ವರ ದೇವಸ್ಥಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ 604ನೇ ಜಯಂತಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯರಾದ ಶ್ರೀ ಎಚ್ಚರೇಶ್ವರ ಸ್ವಾಮಿಗಳು ಬಸವರಾಜ ಶರಣರು ಮುಗಳಖೋಡ ಮಠಶಾಖೆ ಅಬ್ಬಿಗೇರಿ ಪೂಜ್ಯರೊಂದಿಗೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿಯ ಆಚರಣೆ ನಿಮಿತ್ಯವಾಗಿ ಜ್ಯೋತಿ ಬೆಳಗಿಸಿ ಬಸವರಾಜ್ ಶರಣರು ಮುಗಳಖೋಡ ಮಠ ಶಾಖೆ ಅಬ್ಬಿಗೇರಿ ಇವರು ಮಾತನಾಡುತ್ತಾ ಇವತ್ತು ಲಿಂಗ ಅನ್ನೋದು ಗೂಟಕ್ಕೆ ತೆಗೆದು ಹಾಕಿದ್ದಾರೆ ಅದಕ್ಕೆ ತಾಯಂದಿರಿಗೆ ಹೇಳಬೇಕಾದರೆ ಲಿಂಗ ಯಾರ ಕೊರಳಿಗೆ ಇರತ್ತೋ ಅವರು ನಿಜವಾಗಲೂ ಹೇಮರೆಡ್ಡಿ ಮಲ್ಲಮ್ಮ ಎಂದರು.
ಉಪನ್ಯಾಸ ಮಾಡಿದ ವಿ. ಕೆ. ಪಾಟೀಲರು ನಾವು ಇವತ್ತು 14 ಶತಮಾನ ಕಳೆದರೂ ಹೇಮರೆಡ್ಡಿ ಮಲ್ಲಮ್ಮನ ಕೀರ್ತಿ ಮರೆಯಬಾರದು ಯಾಕೆಂದರೆ ಹೇಮರೆಡ್ಡಿ ಮಲ್ಲಮ್ಮ ಎಷ್ಟೇ ಕಷ್ಟ ಬಂದರೂ ವಿಭೂತಿ ಹಣೆಗೆ ಹಚ್ಚಿಕೊಂಡು ಶ್ರೀ ಮಲ್ಲಿಕಾರ್ಜುನ (ಲಿಂಗ)ನೊಂದಿಗೆ ಪೂಜೆ ಮಾಡಿ ಭಕ್ತಿಯಿಂದ ಶ್ರೀ ಮಲ್ಲಿಕಾರ್ಜುನನ್ನು ಪ್ರತ್ಯಕ್ಷ ಮಾಡಿಸಿಕೊಂಡು ನಮ್ಮ ರೆಡ್ಡಿ ಸಮಾಜ ಬಡತನಕ್ಕೆ ಕಷ್ಟ ಕೊಡದಂತೆ ನೋಡಿಕೊಳ್ಳುವುದು ನಿನ್ನ ಶಕ್ತಿ ತಂದೆ ಎಂದು ಬೇಡಿಕೊಂಡರು ಆಗ ಮಲ್ಲಿಕಾರ್ಜುನ ನೀನು ಕೇಳಿದ ವರವು ಸದಾ ಕಾಲ ರೆಡ್ಡಿ ಮನೆತನವು ಬಂಗಾರದ ಕಡ್ಡಿಯಾಗಿ ಅಜರಾಮರವಾಗಿ ಉಳಿಯುತ್ತದೆ ಎಂದು ಆಶೀರ್ವದಿಸಿದರು.
ವಿವೇಕ್ ಯಾವಗಲ್, ಅಕ್ಷಯ ಪಾಟೀಲ್, ರಾಜುಗೌಡ ಕೆಂಚನಗೌಡರ, ಪ್ರಕಾಶಗೌಡ ತಿರಕನಗೌಡ, ಅನಿಲ ತೆಗ್ಗಿನಮನಿ, ಡಾ ಶಿವನಗೌಡ ಹಟ್ಟಿ, ಮಲ್ಲನಗೌಡ ತಿಮ್ಮನಗೌಡ್ರ, ಹೇಮರಡ್ಡಿ ಮಲ್ಲಮ್ಮನ ಸೇವಾ ಸಮಿತಿ ಸರ್ವ ಸದಸ್ಯರು ಸೇರಿದಂತೆ ಗುರುಹಿರಿಯರು ಭಾಗವಹಿಸಿದ್ದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















