ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಕಲಿಕೆಯು ಹೊಸ ಯುಗಕ್ಕೆ ನಾಂದಿ

ಶಾಲಾ ಪ್ರಾರಂಭೋತ್ಸವಕ್ಕೆ ಪುಷ್ಪ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಶಿಕ್ಷಕರು.

ತುಮಕೂರು: ಕೊರಟಗೆರೆ ತಾಲ್ಲೂಕಿನ ಹೊಸಕೋಟೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ನಿನ್ನೆ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ನಮನ ಮತ್ತು ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಮಾಡುವ ಉಪಕರಣ ಜೋಡಣೆ ಮಾಡುವುದರ ಮುಖಾಂತರ ಶಾಲೆಯನ್ನು ಪ್ರಾರಂಭಿಸಿದರು.

ಆರಂಭದ ದಿನವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಪುಷ್ಪಗಳನ್ನು ನೀಡಿ ಸ್ವಾಗತಿಸಿ ಶಾರದಾ ದೇವಿಗೆ ಪೂಜೆಯನ್ನು ಮಾಡಿ ಡಿಜಿಟಲ್ ಸ್ಕ್ರೀನ್ ಅಳವಡಿಸಿ ವಿದ್ಯಾರ್ಥಿಗಳನ್ನು ತುಂಬು ಹೃದಯದಿಂದ ಆಶಿಸುತ್ತಾ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಉತ್ತಮ ಸಮಾಜವನ್ನು ಕಟ್ಟೋಣ ಹಾಗೂ ಪ್ರೈವೇಟ್ ಶಾಲೆಗಳಿಗೆ ಸೇರಿಸಿ ಹಣವನ್ನು ದುಂದು ವೆಚ್ಚ ಮಾಡಬೇಡಿ ನಮ್ಮ ಶಾಲೆಯ ಶಿಕ್ಷಕರು ಈ ಹೊಸ ತಂತ್ರಜ್ಞಾನ ಡಿಜಿಟಲ್ ಮಾರ್ಗದರ್ಶನ ಎಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮವು ಸರ್ಕಾರಿ ಶಾಲೆಯಲ್ಲಿ ಇರುವುದರಿಂದ ಹಳ್ಳಿ ಪ್ರದೇಶಗಳಲ್ಲಿ ತುಂಬಾ ಅನುಕೂಲವಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕರು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪ ನಿರ್ದೇಶಕರಾದ ಶ್ರೀಯುತ ಎಚ್ ಎನ್ ರಾಜು ರವರು ಈ ಶಾಲೆಯ ಈ ಗ್ರಾಮದ ಹಳೆ ವಿದ್ಯಾರ್ಥಿ ನಾನಾಗಿದ್ದು ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಇಂದು ಉತ್ತಮ ವಿದ್ಯಾಭ್ಯಾಸ ಮಾಡುತ್ತಿದ್ದು ಶಾಲಾ ಕಟ್ಟಡವೂ ಇದೆ. ನಮ್ಮ ಕಾಲದಲ್ಲಿ ಒಂದು ರೂಮಿತ್ತು. ಇಂದು ತರಗತಿಗೆ ಒಂದೊಂದು ರೂಮ್ ಇದ್ದು ಉತ್ತಮ ಶಿಕ್ಷಕರು ಮತ್ತು ಉತ್ತಮ ವಾತಾವರಣ ಆಕರ್ಷಕ ಕಲಿಕಾ ವಾತಾವರಣ ನಿರ್ಮಾಣ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸ್ಟೇಷನರಿ ಎಲ್ಲವೂ ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. ಆದ್ದರಿಂದ ನಮ್ಮ ಶಾಲೆಗೆ ಶಾಲಾ ಶಿಕ್ಷಕರು ಸಹಾಯದೊಂದಿಗೆ ಒಂದು ಡಿಜಿಟಲ್ ತಂತ್ರಜ್ಞಾನದ ಬೋರ್ಡನ್ನು ನಮ್ಮ ಶಾಲೆಗೆ ಅಳವಡಿಕೆ ಮಾಡಿದ್ದೇವೆ ನೀವು ಉತ್ತಮ ವಿದ್ಯಾರ್ಥಿಗಳಾಗಿ ಸಮಾಜಮುಖಿ ಚಿಂತನೆ ಹೊಂದಿ ಬೆಳೆಯಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಸಹ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟು ಅದು ನಮ್ಮ ಶಿಕ್ಷಕರು ಮಾಡುತ್ತಾರೆ ಎಂದು ಹೇಳಿದರು. ಶಾಲಾ ಪರಿಸರ ಸ್ವಚ್ಛವಾಗಿದ್ದರೆ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಮತ್ತು ಶಿಕ್ಷಣ ಬಲವರ್ಧನೆಗೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿ ಆರ್ ಪಿ ಹರೀಶ್ ಕುಮಾರ್ ರವರು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿ ತಂತ್ರಜ್ಞಾನ ಯುಗದಲ್ಲಿ ನಾವು ಬದುಕಬೇಕಾದರೆ ಉತ್ತಮ ಗ್ರಾಮೀಣ ಶಿಕ್ಷಣಕ್ಕೆ ಹೊಸ ಹೊಸ ಯೋಜನೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಈ ಹೊಸ ತಂತ್ರಜ್ಞಾನದ ಯುಗದಲ್ಲಿ ಡಿಜಿಟಲ್ ಸ್ಮಾರ್ಟ್ ಕಲಿಕೆಯು ವಿದ್ಯಾರ್ಥಿಗಳಿಗಲ್ಲದೆ ಶಿಕ್ಷಕರ ಪಾತ್ರವೂ ಬೋಧನೆಗೆ ಸೀಮಿತವಾಗಿರದೆ ಉತ್ತಮ ಮಾರ್ಗದರ್ಶನ ಹಾಗೂ ಸೂಕ್ತ ಬಳಕೆದಾರರಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಯುವಂತೆ ಮಾಡಬೇಕು. ಸ್ಮಾರ್ಟ್ ಕ್ಲಾಸ್ ಗಳು ಆನ್ಲೈನ್ ವೇದಿಕೆಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಬಳಸಿ ಬೋಧನೆ ಮಾಡುವುದು ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಮತ್ತು ಸುಲಭವಾಗಿರುತ್ತದೆ ತಂತ್ರಜ್ಞಾನ ಮತ್ತು ಅಂತರ್ಜಾಲ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ರೀತಿ ಗ್ರಹಿಸುತ್ತದೆ. ಮಗುವಿನ ಗ್ರಹಿಕೆ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ತೋರಿಸುವ ಕೆಲಸ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯು ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಉಪ ನಿರ್ದೇಶಕರು ಹೆಚ್ ಎನ್ ರಾಜುರವರು.,ಸಿಇಓ ಗಂಗಮ್ಮ,ಸಿ ಆರ್ ಪಿ ಹರೀಶ್ ಕುಮಾರ್, ಸಿ ಆರ್ ಪಿ ರಂಗನಾಥ್, ದಾನಿಗಳಾದ ನರಸಿಂಹಯ್ಯ ಮತ್ತು ಮುಖ್ಯ ಶಿಕ್ಷಕರಾದ ಶ್ರೀಯುತ ಕಾಂತಪ್ಪ ಸಿಜಿ, ಸಹ ಶಿಕ್ಷಕಿಯಾದ ಶ್ರೀಮತಿ ಮಂಜುಳಾ, ಸಹ ಶಿಕ್ಷಕರಾದ ಹನುಮಂತರಾಜು ಅಧ್ಯಕ್ಷರು ಮತ್ತು ಪೋಷಕರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ. ಪ್ರಸನ್ನಕುಮಾರ್ ಎಸ್.ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!