ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರಿ ಶಾಲೆಗಳಿಂದ ಮಾತ್ರ ಸಮಾನ ಶಿಕ್ಷಣ : ಬಸವರಾಜ ಬಾದರ್ಲಿ

ಸಿಂಧನೂರು : ಸರ್ಕಾರಿ ಶಾಲೆಗಳು ವಿವಿಧ ಸಂಸ್ಕೃತಿಗಳ ಸಮ್ಮೀಲನ. ಸರ್ಕಾರಿ ಶಾಲೆಗಳು ಶ್ರೀಮಂತರು-ಬಡವರು ಎನ್ನದೇ ಎಲ್ಲರಿಗೂ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದರೆ ಖಾಸಗಿ ಶಾಲೆಗಳಲ್ಲಿ ಲಕ್ಷಗಟ್ಟಲೇ ಹಣ ನೀಡಿದರೆ ಮಾತ್ರ ಶಾಲೆಯಲ್ಲಿ ಪ್ರವೇಶ ಸಿಗುತ್ತದೆ. ಒಂದರ್ಥದಲ್ಲಿ ಸರ್ಕಾರಿ ಶಾಲೆಗಳಿಂದ ಮಾತ್ರ ಸಮಾನ ಶಿಕ್ಷಣ ಲಭಿಸುತ್ತದೆ ಎಂದು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಸವರಾಜ ಬಾದರ್ಲಿ ಅಭಿಪ್ರಾಯಪಟ್ಟರು.
ಅವರು ಸೋಮವಾರದಂದು ನಗರದ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಮತ್ತು ಪೋಷಕ-ಶಿಕ್ಷಕರ ಮಹಾಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರುಕುತ್ತದೆ. ಪಾಲಕರು ಇದನ್ನು ಅರ್ಥ ಮಾಡಿಕೊಂಡು ಸರ್ಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಸಿಂಧನೂರು ತಾಲೂಕಿನಲ್ಲಿಯೇ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಆದರ್ಶ ಶಾಲೆಯು ಮುನ್ನಡೆಯುತ್ತಿದೆ ಹಾಗೂ ಈ ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವು ಇಡೀ ಕಲಬುರಗಿ ವಿಭಾಗದಲ್ಲಿ ಅತ್ಯುತ್ತಮವಾಗಿದೆ ಎಂದರು.
ಸರಕಾರಿ ಆದರ್ಶ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಶಿವರಾಜ್ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಬದುಕಿಗೆ ತಾವೇ ಶಿಲ್ಪಿಗಳು. ಪ್ರಸ್ತುತ ವರ್ಷದಲ್ಲಿ ಪ್ರಾರಂಭ ಆಗಿರುವ ಪಿಎಂಶ್ರೀ ಪದವಿ ಪೂರ್ವ ಕಾಲೇಜು ವಿಜ್ಞಾನ ಇಲ್ಲವೇ ಕಾಮರ್ಸ್ ವಿಭಾಗಕ್ಕೆ ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದರು.

ಹೂ ಮಳೆಯ ಸ್ವಾಗತ:
2026-27ನೇ ಸಾಲಿಗೆ ಪ್ರವೇಶ ಪಡೆದು ಮೊದಲನೇ ದಿನ ಶಾಲೆಗೆ ಆಗಮಿಸಿದ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಶಾಲಾ ಶಿಕ್ಷಕರು ಹೂವಿನ ಮಳೆಗೈಯುವ ಮೂಲಕ ಸ್ವಾಗತ ಕೋರಿದರು. ಈ ಕಾರ್ಯಕ್ರಮದಲ್ಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳು ಮೊದಲ ದಿನವೇ ಭಾಗವಹಿಸಿದ್ದು ಗಮನ ಸೆಳೆಯುವಂತಿತ್ತು.
ವೇದಿಕೆಯ ಮೇಲೆ ಸದಸ್ಯರಾದ ಶೇಖರಯ್ಯಸ್ವಾಮಿ ಜವಳಗೇರಾ, ಮೌಲಾಸಾಬ, ರೇಣುಕಾ ಸೇರಿದಂತೆ ಅನೇಕರಿದ್ದರು. ಸದಸ್ಯರಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ಪಾಲಕರಾದ ಲಿಂಗರಾಜ ಉದ್ಬಾಳ, ವಕೀಲರಾದ ವೀರಭದ್ರಪ್ಪ ಹೊಸಮನಿ, ಸಾಕ್ಷಿ, ರಮ್ಯಶ್ರೀ ಕುಲಕರ್ಣಿ, ತೇಜಶ್ವಿನಿ ಮಾವಿನಭಾವಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸ್ವಾಗತ: ಕಲಮಂಗಿ ಶಾಲೆಯಿಂದ ಪ್ರಸ್ತುತ ಸಾಲಿನಲ್ಲಿ ಆದರ್ಶ ವಿದ್ಯಾಲಯಕ್ಕೆ ವರ್ಗಾವಣೆಯಾಗಿ ಬಂದಿರುವ ಆಂಗ್ಲ ಭಾಷಾ ಶಿಕ್ಷಕರಾದ ವೀರೇಶ ಗೋನವಾರ ಇವರನ್ನು ಶಾಲಾ ಎಸ್.ಡಿ.ಎಮ್.ಸಿ ಮತ್ತು ಸಕಲ ಶಿಕ್ಷಕರ ವತಿಯಿಂದ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.

ಸನ್ಮಾನ : ಇದೇ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ 600ಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದ 8 ಜನ ವಿದ್ಯಾರ್ಥಿಗಳನ್ನು ಶಾಲೆಯ ಶಾಲಾ ಎಸ್.ಡಿ.ಎಮ್.ಸಿ ಮತ್ತು ಸಕಲ ಶಿಕ್ಷಕರ ಸನ್ಮಾನಿಸಲಾಯಿತು.

ಪರಿಚಯ: ಶಾಲೆಯ ವಿವಿಧ ಯೋಜನೆಗಳು, ಮಕ್ಕಳು ಹಕ್ಕುಗಳು, ಪಿಎಂಶ್ರೀ ಶಾಲೆಯ ಸವಲತ್ತಗಳನ್ನು ಕುರಿತಂತೆ ಶಿಕ್ಷಕರಾದ ಬಸವರಾಜ ಆನೆಗುಂದಿ, ಭೀಮರೆಡ್ಡಿ, ವೀರೇಶ ಗೋನವಾರ ಪಾಲಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದು ಎಲ್ಲರನ್ನೂ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಸಾವನ್ ಕೆ ಇವರು ಸ್ವಾಗತಿಸಿದರು. ಇಂಗ್ಲಿಷ್ ಶಿಕ್ಷಕ ಮಲ್ಲಪ್ಪ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತ ಶಿಕ್ಷಕ ಜಡೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೌನೇಶ್ ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!