
ಶ್ರೀಮತಿ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದಲ್ಲಿ “ವಿಶ್ವ ತಂಬಾಕು ರಹಿತ ದಿನ” ವನ್ನು ಆಚರಿಸಲಾಯಿತು.
ರಾಯಚೂರು ಜಿಲ್ಲೆ ಲಿಂಗಸೂಗೂರಿನ ಶ್ರೀ ಮತಿ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ದಿ. 31-05-2026 ರಂದು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಉಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ ಲಿಂಗಸೂಗೂರಿನ ಅಧ್ಯಕ್ಷರಾದ ಶ್ರೀ ಸಂಜೀವ ಕುಮಾರ ಕಂದಗಲ್ ರವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಅನೇಕರು ದುಷ್ಪರಿಣಾಮದ ಬಗ್ಗೆ ಅರಿವು ಇದ್ದರೂ ಫ್ಯಾಷನ್ ರೀತಿಯಲ್ಲಿ ತಂಬಾಕು ಸೇವನೆ ಮಾಡುತ್ತಿದ್ದಾರೆ ಇದರಿಂದ ಹೃದಯಾಘಾತ, ರಕ್ತದೊತ್ತಡ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸೇರಿದಂತೆ ಅನೇಕ ರೋಗಗಳು ಬರುತ್ತವೆ. ಇಂತಹ ದುಶ್ಚಟಗಳಿಂದ ದೂರವಿದ್ದು ನಮ್ಮ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶ್ರೀ ವೆಂಕಟೇಶ ಕವಿತಾಳ ಪ್ರಾಚಾರ್ಯರು ಬಿ. ಎಡ್ ಕಾಲೇಜು ಇವರು ಮಾತನಾಡುತ್ತಾ ತಂಬಾಕು ಸೇವನೆ ಆರಂಭದಲ್ಲಿ ಸಾಮಾನ್ಯ ಅಭ್ಯಾಸದಂತೆ ಕಂಡು ಬಂದರೂ ಅದು ಮುಂದೆ ಗಂಭೀರ ವ್ಯಸನವಾಗಿ ಮಾರ್ಪಟ್ಟು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಎಸ್. ಬಿ.ಜಿ. ಲಾ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಅಮರೇಶ ಗೌಡೂರು ರವರು ಸಹ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ತಂಬಾಕು ಸೇವನೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ರಕ್ತಹೀನತೆ ಉಂಟಾಗಿ ಶ್ವಾಸಕೋಶ, ಕರುಳು ರೋಗಗಳಿಗೆ ವಿದ್ಯಾರ್ಥಿಗಳು ಬಲಿಯಾಗುತ್ತಾರೆ ಅದಕ್ಕೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಡಾ|| ಚಂದ್ರಶೇಖರ ಹುನುಕುಂಟಿ, ಶ್ರೀಮತಿ ಚೋಳಮ್ಮ, ಶ್ರೀ ವೆಂಕಟೇಶ್ ಪೂಜಾರಿ, ಶ್ರೀ ಶಬ್ಬೀರ್ ಪಾಶ, ಶ್ರೀ ಶಂಭುಲಿಂಗಪ್ಪ, ಶ್ರೀ ಶಿವರಾಜ ಮೇಟಿ ಸೇರಿದಂತೆ ಕಾನೂನು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಶ್ರೀ ವೆಂಕಟೇಶ ನವಲಕಲ್




















