ಕಾಳಗಿ: ತಾಲೂಕಿನ ಹಳ್ಳಿಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನ ನಡೆಸಲು ಹಾಗೂ ರೈತರಿಗೆ ಬೇಕಾಗಿರುವ ಸಾಮಗ್ರಿಗಳು ತಮ್ಮ ಊರಿನಲ್ಲಿ ದೊರಕುವಂತಾಗಲು ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಇದು ರೈತರಿಗೆ ಯಾವುದೇ ರೀತಿಯಿಂದ ಸಹಾಯವಾಗುವ ಕೆಲಸ ಮಾಡುತ್ತಿಲ್ಲ, ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು ಅವಳಿ ತಾಲೂಕಿನ ರೈತರಿಗೆ ಬೀಜ ಹಾಗೂ ರಸಗೊಬ್ಬರದ ಅತ್ಯವಶ್ಯಕವಾಗಿದೆ ಆದರೆ ರಸಗೊಬ್ಬರ ಬೀಜ ನೀಡಬೇಕಾದ ಸಂಘ-ಸಂಸ್ಥೆಗಳು ಕುಂಟು ನೆಪಗಳನ್ನು ಹೇಳಿ ಜಾರಿಕೊಳ್ಳುತ್ತಿದ್ದಾರೆ, ತಾಲೂಕುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಸೊಸೈಟಿಗಳು ಮಾತ್ರ ರಸಗೊಬ್ಬರ ವಿತರಣೆ ಮಾಡುತ್ತಿದ್ದಾರೆ. ಆದರೆ ಇನ್ನೂ ಬಹಳಷ್ಟು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯಾವುದೇ ರಸಗೊಬ್ಬರಾಗಲಿ ಬೀಜಗಳಾಗಲಿ ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳಾಗಲಿ ವಿತರಿಸುತ್ತಿಲ್ಲ. ಯಾಕೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷರಾದ ವೀರಣ್ಣ ಗಂಗಾಣಿಯವರು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯೆ ಡಿಡಿ ತುಂಬಲು ಹಣವಿಲ್ಲ ಪರವಾನಿಗೆ ಇಲ್ಲ ಜಿಎಸ್ಟಿ ಕಟ್ಟಿಲ್ಲ ಎಂದು ಉಡಾಫೆ ಉತ್ತರಗಳು ಕೊಡುತ್ತಿದ್ದಾರೆ. ಇವರ ಉಡಾಫೆ ಮಾತುಗಳಿಗೆ ಬೇಸತ್ತ ರೈತರು ಕೃಷಿ ಪುತ್ತಿನ ಸಹಕಾರ ಸಂಘದ ವಿರುದ್ಧ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಹಾಗೂ ರೈತ ಸೇನೆ ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















