ಮೈಸೂರು /ನಂಜನಗೂಡು : ಶ್ರೀ ಕಂಟೇಶ್ವರ ದೇವಸ್ಥಾನದ ಮುಂಭಾಗ ದಿ. 06/06/2026 ರಂದು ಹನುಮ ಜಯಂತಿಯನ್ನು ಆಚರಿಸಲಾಯಿತು. ಸುಮಾರು ಸಂಜೆ 4.00 ಸಮಯದಲ್ಲಿ ಮಲ್ಲನ ಮೂಲೆ ಶ್ರೀಗಳಿಂದ ಜಯಂತಿಗೆ ಚಾಲನೆ ನೀಡಲಾಯಿತು. ಹನುಮ ಜಯಂತಿ ಪ್ರಯುಕ್ತ ಪೊಲೀಸ್ ಕಾವಲು ಪಡೆ ಯಾವುದೇ ಗಲಾಟೆಯಾಗದಂತೆ ಕರ್ತವ್ಯ ನಿರ್ವಹಿಸಿದರು. ಜಾನಪದ ಕಲಾ ತಂಡಗಳು ಭಾಗವಹಿಸಿ ಹನುಮ ಜಯಂತಿಯನ್ನು ಮೆರವಣಿಗೆಯೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಅದ್ದೂರಿಯಾಗಿ ಆಚರಿಸಿದರು.
ವರದಿ ಮಹಾದೇವಯ್ಯ




















