
ಗದಗ : ರೋಣ ತಾಲೂಕು- ಸಹಾಯಕ ಕೃಷಿ ಅಧಿಕಾರಿಗಳಾಗಿ ರೈತರ ಕಷ್ಟ ನಿವಾರಣೆಗಾಗಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ ಸರಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಿ ಅನುಕೂಲ ಒದಗಿಸಿ ಇವತ್ತಿಗೂ ಹಗಲು ಇರುಳು ಎನ್ನದೆ ರೈತರ ಯೋಗಕ್ಷಮ ವಿಚಾರಿಸಿ ಖುದ್ದು ಅವರ ರೈತರ ಹೊಲಕ್ಕೆ ಹೋಗಿ ಬೆಳೆಗಳನ್ನು ವೀಕ್ಷಿಸಿ ರೋಗ ಮತ್ತು ಕ್ರಿಮಿ ಕೀಟನಾಶಕ ಬಗ್ಗೆ ಸಲಹೆ ನೀಡಿದವರೆಂದರೆ ಅವರೇ ಶ್ರೀ ಶಿವಪುತ್ರಪ್ಪ ದೊಡ್ಡಮನಿ ರವರು. ಕಳೆದ 28 ವರ್ಷಗಳಿಂದ ಸತತವಾಗಿ ಸರಕಾರಿ ಕೃಷಿ ಸಹಾಯಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾ ಒಳ್ಳೆಯ ನಡವಳಿಕೆ ಇಟ್ಟುಕೊಂಡು ಒಂದು ಸಾಧನೆಗೈದ ವ್ಯಕ್ತಿ ಎಂದರು ತಪ್ಪಾಗಲಾರದು.
ಕೃಷಿ ಅಧಿಕಾರಿಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ನೆರವೇರಿಸಿ ಶಿವಪುತ್ರಪ್ಪ ಆರ್. ದೊಡ್ಮನಿ ಅವರ ಸಹ ಕುಟುಂಬದವರೊಂದಿಗೆ ಗೌರವ ಸನ್ಮಾನ ಮಾಡಿ ಕೃಷಿ ನಿರ್ದೇಶಕರಾದ ಎಸ್ ಎಫ್ ತಹಶೀಲ್ದಾರ್ ರವರು ಮಾತನಾಡುತ್ತಾ ನಮ್ಮ ಕೃಷಿ ಇಲಾಖೆಯಲ್ಲಿ
ಶಿವಪುತ್ರಪ್ಪ ಆರ್. ದೊಡ್ಮನಿಯವರು ಉತ್ತಮ ಸೇವೆ ಸಲ್ಲಿಸಿದರು, ಸಮಾಜದ ಒಳ್ಳೆ ಕೆಲಸ ಅವರಲ್ಲಿ ಮಾಡುವ ಅವಕಾಶ ಆ ದೇವರು ಆಸಕ್ತಿ,ಶಕ್ತಿ ಕೊಡಲಿ ಎಂದರು.
ಇದೇ ಸಂದರ್ಭದಲ್ಲಿ ಹೊಳೆಆಲೂರು ಹೋಬಳಿಯ ಸಹಾಯಕ ಕೃಷಿ ಅಧಿಕಾರಿಗಳಾದ ಸಾವಿತ್ರಿ ಶಿವನಗೌಡರು, ರೋಣ ಸಹಾಯಕ ಕೃಷಿ ಸಂಪರ್ಕ ಅಧಿಕಾರಿಗಳಾದ ಕೃಷ್ಣ ಶಿರೂರು, ರವೀಂದ್ರಗೌಡ ಪಾಟೀಲ್ ಬೀಳಗಿ ಸೇರಿದಂತೆ ಇನ್ನೂ ಅನೇಕ ರೈತರು ಪಾಲ್ಗೊಂಡಿದ್ದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















