ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೊಂದು ನ್ಯಾಯ : ಸಾಧಿಕ್ ಮುಲ್ಲಾ ಆಕ್ರೋಶ
ಉತ್ತರ ಕನ್ನಡ/ ದಾಂಡೇಲಿ : ಜಿ+2 ಮನೆಗಳು ಬಡ ಫಲಾನುಭವಿಗಳಿಗೆ ಸಿಗಲಿ ಹಾಗೂ ಜಿ+2 ಮನೆಗಳನ್ನು ಬಾಡಿಗೆ ನೀಡಿದವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ ದಾಂಡೇಲಿ ನಗರದ ಅಂಬೆವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಈಗಾಗಲೇ ಸುಮಾರು 192 ಮನೆಗಳನ್ನು ತಯಾರಿಯಾಗಿ ಕೆಲವು ಹಂಚಿಕೆಯಾಗಿದೆ ಕೆಲವು ಹಂಚಿಕೆಯಾಗಿಲ್ಲ. ಜಿ+2 ಮನೆಗಳನ್ನು ಹಂಚಿಕೆಯಾಗಿ ಅಲ್ಲಿ ವಾಸವಾಗಿರುವ ಬಡ ಫಲಾನುಭವಿಗಳನ್ನು ಗಂಭೀರವಾಗಿ ಪರಿಶೀಲನೆ ಮಾಡಬೇಕೆಂದು ಒತ್ತಾಯ ಯಾಕೆಂದರೆ ಜಿ+2 ಮನೆಗಳನ್ನು ಬಾಡಿಗೆ ಮೂಲಕ ನೀಡಿದ್ದಾರೆ ಜಿ+2 ಬಡ ಫಲಾನುಭವಿಗಳ ಮನೆಗಳನ್ನು ಹಂಚಿಕೆ ಮಾಡುವ ಮೊದಲನೇ ಹಂತದ ಸಭೆಯಲ್ಲಿ ಕ್ಷೇತ್ರದ ಶಾಸಕರು ದೇಶಪಾಂಡೆಯವರು ನಗರಸಭೆ ಹಾಗೂ ತಹಶೀಲ್ದಾರ್ ಹಾಗೂ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ಏನೆಂದರೆ ಜಿ+2 ಮನೆಗಳು ಬಡ ಫಲಾನುಭವಿಗಳಿಗೋಸ್ಕರ ಇರುತ್ತವೆ. ಯಾರೂ ಕೂಡ ಬಾಡಿಗೆ ನೀಡುವುದಾಗಲಿ ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ತಿಳಿಸಲಾಗಿತ್ತು.
ಈ ಹಿಂದೆಯೂ ಕಿತ್ತೂರು ಕರ್ನಾಟಕ ಸೇನೆ ವತಿಯಿಂದ ಮಾಧ್ಯಮ ವರದಿ ಕೂಡ ಮಾಡಲಾಗಿತ್ತು. ಆದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಯಾಕೆ ?
” ನಗರಸಭೆ ಪೌರಾಯುಕ್ತರು 5 ದಿನಗಳಲ್ಲಿ ಅಂಬೆವಾಡಿಯ ಜಿ+2 ಮನೆಗಳನ್ನು ಯಾರು ಬಾಡಿಗೆ ನೀಡಿದ್ದಾರೆ ಕೂಡಲೇ ತನಿಖೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ದಾಂಡೇಲಿಯಲ್ಲಿ ಬಡವರಿಗೆ ಆಗುವ ಅನ್ಯಾಯಕ್ಕೆ ಸ್ಪಂದಿಸಿ ಬಡವರಿಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಕಿತ್ತೂರು ಕರ್ನಾಟಕ ಸೇನೆ ವತಿಯಿಂದ ಉಗ್ರ ಸ್ವರೂಪದ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ”.
- ಸಾಧಿಕ್ ಮುಲ್ಲಾ ,ಅಧ್ಯಕ್ಷರು ವಿಧಾನಸಭಾ ಕ್ಷೇತ್ರ.
ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಸಾಧಿಕ ಮುಲ್ಲಾ, ಉಪಾಧ್ಯಕ್ಷರು ಆನಂದ ಬಂದಿ ನಗರ, ಘಟಕ ಅಧ್ಯಕ್ಷರು ಸೈಯದ್ ಅಂಕೋಲೆಕರ, ಆಟೋ ಘಟಕ ಅಧ್ಯಕ್ಷರು ಅಂತೋನಿ, ಸಂಘಟನೆ ಮುಖಂಡರಾದ ದಿಲಾವಾರ ಶೈಖ್, ಜಾಫರ್, ಶಮಿಮ ಶೈಖ್, ಸೇರಿದಂತೆ ಸಂಘಟನೆ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ ತೇಜಸ್ ರಾವ್, ದಾಂಡೇಲಿ




















