ಬೆಳಗಾವಿ/ಬೈಲಹೊಂಗಲ : ಮುಂಗಾರು ಮಳೆಗಾಲ ಪ್ರಯುಕ್ತ ಬೈಲಹೊಂಗಲ ನಗರದಲ್ಲಿ ಬಾರಿ ಮಳೆ ಬೀಳುತ್ತಿದ್ದು, ಇದರಿಂದ ಹಳೆಯ ಶಿಥಿಲಾವಸ್ಥೆಯಲ್ಲಿರುವ ಮನೆ ಮತ್ತು ಕಟ್ಟಡಗಳು ಬೀಳುವ ಸಂಭವ ಇರುವುದರಿಂದ ಸಾರ್ವಜನಿಕರು ಮುಂಜಾಗೃತವಾಗಿ ಸುರಕ್ಷಿತ ಸ್ಥಳಗಳಲ್ಲಿ ವಾಸಿಸಲು ಅಥವಾ ನಗರಸಭೆಯಿಂದ ನಿಗಧಿಪಡಿಸಿದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಲು ತಿಳಿಸಿದೆ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮನೆಗಳು ಇದ್ದಲ್ಲಿ ತಮ್ಮ ಹಾಗೂ ಅಕ್ಕ ಪಕ್ಕದ ಸಾರ್ವಜನಿಕರ ಹಿತದೃಷ್ಠಿಯಿಂದ ತೆರವುಗೊಳಿಸಕೊಳ್ಳತಕ್ಕದ್ದು ಹಾಗೂ ಚರಂಡಿಗಳಲ್ಲಿ ತ್ಯಾಜ್ಯ ಎಸೆಯದೆ ನೀರು ಸರಾಗವಾಗಿ ಹರಿಯುಂತೆ ನೋಡಿಕೊಳ್ಳುವುದು ಮತ್ತು ಮಳೆಯಿಂದಾಗಿ ಯಾವುದೇ ತೊಂದರೆಗಳು ಉಂಟಾದಲ್ಲಿ ದೂರು ಮತ್ತು ಸಹಾಯಕ್ಕಾಗಿ ನಗರಸಭೆಯಿಂದ ತೆರೆಯಲಾದ 24/7 ಸಹಾಯವಾಣಿ ಸಂಖ್ಯೆ: 08288-233135 ಕ್ಕೆ ಸಂಪರ್ಕಿಸುವಂತೆ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ಪ್ರಕಟಣೆ ಮೂಲಕ ವಿನಂತಿಸಿರುತ್ತಾರೆ.
ವರದಿ ಮಂಜು ಎಂ.ಚಿಕ್ಕಣ್ಣವರ




















