
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಾನ್ಯ ಸಿ. ಎಸ್. ನಾಡಗೌಡರು ( ಅಪ್ಪಾಜಿ ) ತಾಳಿಕೋಟೆಯ ಪ್ರತಿಷ್ಠಿತ ವ್ಯಾಪಾರಿ ಕೇಂದ್ರವಾದ ಕೃಷಿ ಮಾರುಕಟ್ಟೆಯ ಆವರಣದಲ್ಲಿ ಅಂದಾಜು ಮೊತ್ತ ಐದು ಕೋಟಿ ರೂ. ಗಳಲ್ಲಿ ಮಾರುಕಟ್ಟೆ , ಸಿ.ಸಿ ರಸ್ತೆ, ಚರಂಡಿ ಇತ್ಯಾದಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಪೂಜಾ ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆಯ ಅಡತಿ ಅಂಗಡಿ ಮಾಲೀಕರುಗಳಾದ ಶ್ರೀ ಚಿಂತಪ್ಪ ಗೌಡ ಯಾಳಗಿ, ಶ್ರೀ ಅಶೋಕ ಈ. ಜಾಲವಾದಿ, ಶ್ರೀ ಬಸವರಾಜ ಮಾ. ಕುಂಬಾರ ,ಶ್ರೀ ಬಸನಗೌಡ ವಿ. ಪಾಟೀಲ, ಶ್ರೀ ಸಂಗಮೇಶ ಧನ್ನೂರ ಸೇರಿದಂತೆ ಇನ್ನೂ ಹಲವು ಮಾಲಕರು ಭಾಗವಹಿಸಿದ್ದರು. ಇವರುಗಳ ಜೊತೆಗೆ ಶಾಸಕರ ಬೆಂಬಲಿಗರಾದ ಸಿದ್ಧನಗೌಡ ಪಾಟೀಲ (ನಾವದಗಿ ), ಮಾಜಿ ಪುರಸಭೆ ಸದಸ್ಯರಾದ ಪ್ರಭುಗೌಡ ಬ. ಮದರಕಲ, ಪುರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಫಯಾಜ್ ಉತ್ನಾಳ, ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಮುರುಗೇಶ ಸರಶೆಟ್ಟಿ, ಎಪಿಎಂಸಿ ಆಡಳಿತ ವರ್ಗದವರು , ಇಂಜಿನಿಯರ್ ಗಳು, ಸೈಯದ್ ಖಾಜಿಯವರು ಭೂಮಿ ಪೂಜೆ ಮಾಡಿದ ನಂತರ ಎಪಿಎಂಸಿ ಭವನದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಸಂಗಮೇಶ ಸಿ. ಚೌದ್ರಿ




















