ತುಮಕೂರು : ವೀರಲೋಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ನಗರದ ಗಾಜಿನ ಮನೆಯಲ್ಲಿ ಇದೇ ತಿಂಗಳ 26, 27, 28ರಂದು ಹಮ್ಮಿಕೊಂಡಿರುವ ಐದನೇ ಆವೃತ್ತಿಯ ಬೃಹತ್ ವೀರಲೋಕ ” ಪುಸ್ತಕ ಸಂತೆ “ಯ ಲೋಗೋವನ್ನು ಜಿಲ್ಲಾಧಿಕಾರಿ ಶುಭಾಕಲ್ಯಾಣರವರು ಬಿಡುಗಡೆ ಮಾಡಿದರು. ಓದುಗನಿಗೂ, ಕನ್ನಡ ಪುಸ್ತಕಕ್ಕೂ ಇರುವ ನಂಟನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆರ್. ಕೆ. ಶ್ರೀನಿವಾಸ್ ರವರ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಜ್ಞಾನದ ಜಾತ್ರೆಗೆ ನಾಡಿನ 1 ಲಕ್ಷಕ್ಕೂ ಅಧಿಕ ಪುಸ್ತಕ ಪ್ರೇಮಿಗಳು ಹಾಗೂ ಓದುಗರು ಆಗಮಿಸುವ ನಿರೀಕ್ಷೆ ಇದೆ. ವೀರಲೋಕ ಪುಸ್ತಕ ಸಂತೆ ಯಶಸ್ಸಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳು, ಶಾಲೆ ಮತ್ತು ಕಾಲೇಜುಗಳ ನೌಕರರು ಭಾಗವಹಿಸುವಂತೆ ಜಿಲ್ಲೆ ಆಡಳಿತ ಉತ್ತೇಜಿಸಿದ್ದಾರೆ. ಇನ್ನೂ ಹೆಚ್ಚಿನ ಜನಸಂಖ್ಯೆ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ” ಕರುನಾಡ ಕಂದ ಬಳಗ “ದ ವತಿಯಿಂದ ಶುಭ ಹಾರೈಸೋಣ.
ವರದಿ ಲಕ್ಷ್ಮಿ ತುಮಕೂರು




















