ಚುರುಕು ಹಸಿಮೆಣಸಿನಕಾಯಿ ಕೇಳಿತು
ಕೋಪವೇಕೆ ನನ್ನ ಮೇಲೆಂದು ಕುಟುಕಿತು
ಹೆದರಿ ಕಟ್ಟೆಯಲಿ ಜೋಡಿಸಲಾಯಿತು
ಇತರ ಪಕಳೆಗಳಲಿ ಅಲಂಕರಿಸಲಾಯಿತು
ನಂತರದಿ ಮೂಡಿತು ಸುಲಲಿತ ಚಿತ್ತಾರವಾಗಿ
ಭಾವನೆಗಳು ಹೊರಬಂದವು ಕಾವ್ಯವಾಗಿ
ನಲ್ಮುಂಜಾವಲಿ ಬರುತಲಿದೆ ಸುಮನಗಳಿಗಾಗಿ
ಪರಸ್ಪರ ಆಸ್ವಾದಿಸುವ ಎಲ್ಲರೂ ಸಂತಸಕ್ಕಾಗಿ
- ಲಲಿತಾ ಕೆ ಆಚಾರ್, ಬೆಂಗಳೂರು



















