ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನೂ ನಾವು ಪಾಲಿಸಬೇಕು : ಮಹೇಶ ಬಾಬು ಸುರ್ವೆ ಅಭಿಮತ

ಬೆಂಗಳೂರು :ಕರ್ನಾಟಕ ರಾಜ್ಯ ದಲಿತ ಪತ್ರಕರ್ತ ವೇದಿಕೆ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಬೆಂಗಳೂರು ನಗರದ ನಾಗರಬಾವಿಯ ಮಲ್ಲತ್ತಳ್ಳಿಯ
ಕಲಾಗ್ರಾಮದ ಸಭಾಂಗಣ ದಲ್ಲಿ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಬಾಬು ಸುರ್ವೇ
ಮಾತನಾಡುತ್ತಾ ವಿಶ್ವಜ್ಞಾನಿ ಮಹನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಸಾಂಸ್ಕೃತಿಕ ಸೌರಭ ಆಚರಣೆ ಹಬ್ಬದಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವೆಂದರು.
ಕಲೆ ಸಾಹಿತ್ಯ ಸಂಸ್ಕೃತಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಸ್ಮರಿಸುತ್ತಾ ಅವರ ಚಿಂತನೆಗಳನ್ನು ಬಿಂಬಿಸುವ ಈ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇದು ಕೇವಲ ಒಂದು ಆಚರಣೆ ಅಲ್ಲ ಬದಲಿಗೆ ಸಮಾನತೆ ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಮೌಲ್ಯಗಳನ್ನು ಸಾಂಸ್ಕೃತಿಕವಾಗಿ ಬಿಂಬಿಸುವ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಿದೆ ಎಂದು ಅಭಿಪ್ರಾಯಪಟ್ಟರು. ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಪ್ರಾರಂಭಿಸಿದ ಮೂಕ ನಾಯಕ ದಿನಪತ್ರಿಕೆಯ ಮೂಲಕ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳನ್ನು ಪ್ರಕಟಿಸಿ ಆದರ್ಶ ಪ್ರಾಯವಾಗಿದ್ದಾರೆ ಅವರ ಆದರ್ಶಗಳನ್ನ ಇಟ್ಟುಕೊಂಡು ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಟ್ರಸ್ಟ್ ಇಂದು ಹಮ್ಮಿಕೊಂಡಿದ್ದ ಅಂಬೇಡ್ಕರ್ ರವರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಅತ್ಯಂತ ಮನಮೋಹಕವಾಗಿತ್ತು
ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನೃತ್ಯಗಳ ತಂಡಗಳು ವೈವಿಧ್ಯಮಯ ನೃತ್ಯಗಳ ಮೂಲಕ ಗಮನ ಸೆಳೆದುದ್ದನ್ನ ಪ್ರಸ್ತಾಪಿಸಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಗನ ಬಸಪ್ಪ ಬಿರಾದರ ಪ್ರಧಾನ ಮಾಡಿದರು
ಮುಖ್ಯ ಅತಿಥಿಗಳಾಗಿ ಮಹೇಶ್ ಪತ್ರಕರ್ತರು ಕಲಾ ಸಂಘಟಕರು ,ಶ್ರೀನಿವಾಸ್ ಕೊಡ್ಲಿ ರಾಜ್ಯಾಧ್ಯಕ್ಷರು ಜೈ ಕರ್ನಾಟಕ ರಕ್ಷಣಾ ಸಂಘ _
G ನಂದೀಶ್ ಹಿರಿಯ ಪತ್ರಕರ್ತರು,
ಶ್ರೀಮತಿ ಬೀನು ಕಲಾಮಂಟಪ ಮುಖ್ಯಸ್ಥರು,
ಪ್ರಭಾ ಮಹೇಂದ್ರ ನೃತ್ಯ ನಿರ್ದೇಶಕರು,
ಸುಶೀಲಾ ಮಹೇಶ್ ರಾಜ್ಯಾಧ್ಯಕ್ಷರು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಸೇರಿದಂತೆ
ಇತರರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಪತ್ರಕರ್ತರ ವೇದಿಕೆ ಟ್ರಸ್ಟಿನ ರಾಜ್ಯಾಧ್ಯಕ್ಷ ವಿ ಎಸ್ ಕೃಷ್ಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಶಿಕ್ಷಣ ಸಂಘಟನೆ ಮತ್ತು ಹೋರಾಟ ಎಂಬ ಮೂರು ಮೂಲ ಮಂತ್ರಗಳನ್ನು ನೀಡಿದ್ದಾರೆ ಶಿಕ್ಷಣವು ಮನುಷ್ಯನನ್ನು ಸ್ವಾವಲಂಬಿಯನ್ನಾಗಿ ಮತ್ತು ಜಾಗೃತ ನನ್ನಾಗಿ ಮಾಡುತ್ತದೆ ನಮ್ಮ ಸಂಸ್ಕೃತಿಯು ಕೇವಲ ಆಚರಣೆಗಳಿಗೆ ಸೀಮಿತವಾಗದೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತಿರಬೇಕು ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣದ ಬೆಳಕನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲು ಸುಂದರ ಮಾಧ್ಯಮ ಎಂದು ಹೇಳುತ್ತಾ ಭಾರತದ ಸಂವಿಧಾನವನ್ನು ರಚಿಸುವ ಮೂಲಕ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶಕ್ಕೆ ಸಮಾನತೆಯ ಭದ್ರಬುನಾದಿಯನ್ನು ಹಾಕಿದರು ಅವರ ದೃಷ್ಟಿಯಲ್ಲಿ ಸಂಸ್ಕೃತಿ ಎಂದರೆ ಕೇವಲ ಕಲೆ ಆಚರಣೆಗಳಲ್ಲ ಮೊದಲಿಗೆ ಶೋಷಣೆಯಿಂದ ಎಲ್ಲರಿಗೂ ಅಂದರೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸುಂದರ ಸಮಾಜದ ನಿರ್ಮಾಣವೆಂದರು ಎಲೆಮರೆ ಕಾಯಿಯಂತೆ ಇರುವ ಕಲಾವಿದರಿಗೆ ಮಹಿಳೆಯರಿಗೆ ಅಂಗವಿಕಲರಿಗೆ ವೇದಿಕೆ ಕಲ್ಪಿಸಿಕೊಟ್ಟು ಅಂತಹ ಕಲಾವಿದರುಗಳನ್ನು ಬೆಳಕಿಗೆ ತರುವುದೇ ಧ್ಯೇಯವಾಗಿದೆ ಎಂದರು. ಸರ್ಕಾರದ ಯೋಜನೆಗಳನ್ನು ತಿಳಿಸುತ್ತಾ ಸಿಗುವ ಅವಕಾಶಗಳನ್ನು ಎಲ್ಲಾ ಪ್ರಕಾರದ ಕಲಾವಿದರಿಗೆ ಸರಿಯಾದ ರೀತಿಯಲ್ಲಿ ಸಿಗುವಲ್ಲಿ ಸಹಕರಿಸುವುದಾಗಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಕಲಾತಂಡಗಳನ್ನು ಪ್ರಾಯೋಜನೆ ಮಾಡಿತ್ತು
ಅಂಬೇಡ್ಕರ್ ಸಾಂಸ್ಕೃತಿಕ ಸೌರವದಲ್ಲಿ
ರುಕ್ಮಿಣಿ ಸುರ್ವೇ M ಬೆಂಗಳೂರು-ಸಮೂಹ ನೃತ್ಯ
ವಿದ್ಯಾ ಮಂಗಳೂರು ಕೊಪ್ಪಳ–ಸಮೂಹ ನೃತ್ಯ
ಅನುಷಾ ಆರ್ ಬೆಂಗಳೂರು–ಸಮೂಹ ನೃತ್ಯ
ಗೆಜ್ಜೆನಾದ ನೃತ್ಯ ಮಂದಿರ ಬೆಂಗಳೂರು –ನೃತ್ಯ ರೂಪಕ
ಕಲಾ ಮಂಟಪಂ ( ಬಿನು) ಬೆಂಗಳೂರು–ಕಥಕ್ ನೃತ್ಯ
ಸಮೂಹ ನೃತ್ಯ ಗಾಯನ ಭರತನಾಟ್ಯ ಗೆಜ್ಜೆನಾದ ತಂಡ ಮಹಾ ನಾಯಕ ಅಂಬೇಡ್ಕರ್ ಹಾಡಿಗೆ ವಿಶೇಷ ನೃತ್ಯ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಹೇಶ್ ಮೌರ್ಯ ಸ್ವಾಗತ ಹಾಗೂ ನಿರೂಪಣೆಯನ್ನು ನಡೆಸಿಕೊಟ್ಟರು ರುಕ್ಮಿಣಿ ಸುರ್ವೆ ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!