ಎಳೆಯರಲಿ ಅಡಗಿಹ ಕ್ರಿಯಾಶೀಲತೆಯ ಭಾವ
ಅರಳುವುದು ಬೆಳೆವ ವಾತಾವರಣದ ಪ್ರಭಾವ
ಎಡದಲಿ ಮೂರನೇ ತರಗತಿ ಧ್ರುತಿ ಯ ಕೈಚಳಕ
ಬಲದಲಿ ಮೂರು ಸಂವತ್ಸರದ ಧ್ವನಿಯ ಪುಳಕ
ಚಿತ್ತಾರಗಳಾಗಿ ಮೂಡಿವೆ ಎನ್ನ ಸಹವಾಸದಲಿ
ಉಗಮಿಸಿದೆ ಲಘುಕಾವ್ಯ ಚಿಣ್ಣರ ಲಹರಿಯಲಿ
ಬರುತಿದೆ ಸುಮನಗಳ ಮಕ್ಕಳ ಪ್ರಚೋದಿಸಲು
ಜಂಗಮವಾಣಿ ಹಾವಳಿಯಿಂದ ಮುಕ್ತವಾಗಿಸಲು
- ಲಲಿತಾ ಕೆ ಆಚಾರ್, ಬೆಂಗಳೂರು




















