ಬಳ್ಳಾರಿ / ಕಂಪ್ಲಿ : ರಾಜ್ಯದಲ್ಲಿ ರೈತರಿಂದ ಖರೀದಿಸಿದ ಮುಂಗಾರು, ಹಿಂಗಾರು ಜೋಳದ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ನಿರ್ದೇಶನದ ಮೇರೆಗೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ನೇತೃತ್ವದಲ್ಲಿ ರೈತರು ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರೀಕ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಎಂ.ಕೆ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಬಿ.ವಿ.ಗೌಡ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಹಿಂಗಾರು ಮತ್ತು ಜೋಳವನ್ನು ರೈತರಿಂದ ಖರೀದಿ ಮಾಡಿ 4 ತಿಂಗಳು ಕಳೆದರು, ಕೆಲ ರೈತರಿಗೆ ಮುಂಗಾರು ಜೋಳದ ಹಣ ಪಾವತಿ ಆಗಿದು ಬಿಟ್ಟರೆ, ಶೇ.75% ರೈತರಿಗೆ ಇನ್ನು ಹಣ ಪಾವತಿ ಆಗಿರುವುದಿಲ್ಲ, ರೈತ ಜೋಳ ಬೆಳೆದು ಜನವರಿಯಲ್ಲಿ ಕಟ್ಟವು ಮಾಡಿ ಅನೇಕ ಬಾರಿ ಹೊರಟ ಮಾಡಿದ ನಂತರ ಜೋಳ ಖರೀದಿ ಮಾಡಿ ಇಲ್ಲಿಯ ವರೆಗು ಕೂಡ ಹಣ ಪಾವತಿಯಾಗಿಲ್ಲ ರೈತ ಬರುವ ಹಣವೆಲ್ಲ ಬಡ್ಡಿ ಕಟುವಂತಾಗಿ ಸಾಲದ ಸೂಳಿಗೆ ಸಿಲುಕಿಸುತ್ತಿರವುದು ಎಷ್ಟು ಸರಿ ಕಳೆದ ವರ್ಷ ಅತಿ ಹೆಚ್ಚು ಮಳೆಯಿಂದಾಗಿ ನಷ್ಟ ಅನುಭವಿಸಿದ್ದು ಕಣ್ಣ ಮುಂದೆ ಇರುವಾಗ ಸಾಲ ಸುಲ ಮಾಡಿ ಮುಂಗಾರು ಬಿತ್ತನೆ ಮಾಡಿದ ಬೆಳಯಲ್ಲ ಮಳೆಯಿಲ್ಲದೆ ಒಣಗಿ ಹೋಗಿ ನಷ್ಟ ಅನುಭವಿಸಿದ್ದು ಕಾಣುತ್ತದೆ, ಇಂತಾ ಪರಸ್ಥಿತಿಯಲ್ಲಿ ಸರ್ಕಾರ ಖರೀದಿ ಮಾಡಿದ ಜೋಳದ ಹಣವನ್ನು ಕೂಡಲೆ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್, ಮಲ್ಲಣಗೌಡ ಪಾಟೀಲ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















