ಅಪರೂಪದಿ ಸಿಕ್ಕಿರುವ ಬಾಳೆಲೆ ತುಣುಕು
ಸೀಳುತಲಿ ಜೋಡಿಸಲಾಗಿರುವ ಹೊಂಬೆಳಕು
ನಡುವಿನಲಿ ಮೂಡಿದೆ ತಿರಂಗಿನ ಚಿತ್ತಾರವು
ಸಂಜೆಮಲ್ಲಿಗೆಗಳಲಿ ಬೆಳಗುತಿರುವ ಕಿರಣವು
ಭಾವನಾ ತರಂಗಗಳಲಿ ಕಾವ್ಯದಾ ಸಾಲುಗಳು
ನಿತ್ಯ ಕಲಾರಾಧಕರಿಗಿದೊ ಶುಭ ನಮನಗಳು
ಕಾತುರದಿ ಕಾಯುವ ಮನಗಳಿಗಿದು ಅರ್ಪಿತವು
ಕ್ರಿಯಾಶೀಲ ಸುಸಮಯದ ಪರಿಶ್ರಮ ಸಾರ್ಥಕವು
- ಲಲಿತಾ ಕೆ ಆಚಾರ್, ಬೆಂಗಳೂರು




















