ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಸ್ಥಾಪನಾ ದಿನಾಚರಣೆ

ಬೆಂಗಳೂರಿನ ಬಬ್ಬುರೂ ಕಮ್ಮೆ ಸೇವಾ ಸಮಿತಿಯಲ್ಲಿ ಬೆಳಿಗ್ಗೆ 10.30 ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಶ್ರೀ ಅಚ್ಯುತಮೂರ್ತಿ ತಂಡದವರು ವೇದಘೋಷಾ ನಡೆಸಿಕೊಟ್ಟರು

ನಿರ್ವಿಜ್ಞವಾಗಿ ಕಾರ್ಯಕ್ರಮ ನಡೆಯಲು ವಿದ್ಯುಷಿ ಶ್ರೀಮತಿ ಐಶ್ವರ್ಯ ಮಹೇಶ್ ಅವರು ಪ್ರಾರ್ಥನೆ ಮಾಡಿದರು.

ಮಹಾ ಸಭೆಯ ಹಿರಿಯ ಉಪಾಧ್ಯಕ್ಷರು
ಶ್ರೀ ಆರ್ ಲಕ್ಷ್ಮಿಕಾಂತ್ ಎಲ್ಲರನ್ನೂ ಸ್ವಾಗತಿಸಿದರು.

ಕಾರ್ಯದರ್ಶಿಗಳದ ಡಾ. ಎನ್ ಸತ್ಯಪ್ರಕಾಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಡಾ‌. ಜಗನ್ನಾಥ್ ಮಹಾ ಸಭಾ ಬೆಳದ ಬಂದ ದಾರಿಯನ್ನು ಅವರ ಪ್ರಾಸ್ತಾವಿಕ ನುಡಿಯಲ್ಲಿ ಪರಿಚಯಿಸಿದರು.

ಮಾಜಿ ಅಧ್ಯಕ್ಷರಾದ ಡಾ || ಎಂ ಆರ್ ವಿ ಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ವಿಜಯ ವಿಷ್ಣು ಭಟ್ ಡೋಂಗ್ರೆ ಅವರು ಬರೆದ 1948 ರಲ್ಲಿ ಬ್ರಾಹ್ಮಣರ ನರಮೇಧ ಎಂಬ ಪುಸ್ತಕದ ಎರಡನೇ ಆವೃತ್ತಿಯ ಲೋಕಾರ್ಪಣೆ ಮಾಡಲಾಯಿತು ಮತ್ತು ಈ ಪುಸ್ತಕದ ಅನೇಕ ಮಜಲುಗಳನ್ನು ಡಾ || ಹರ್ಷ ಸಮೃದ್ಧ ಅವರು ಪರಿಚಯಿಸಿದರು.

ಕಾರ್ಪೊರೇಟ್ ಸಲಹೆಗಾರರು ಆದ ಶ್ರೀ ಎ ಸಿ ಎನ್ ಮೂರ್ತಿ ಅವರು ಸಂಘಟನೆಯ ಬೆಳವಣಿಗೆ ಬಗ್ಗೆ ಬಹಳ ಉತ್ತಮವಾಗಿ ಮಾತನಾಡಿ ಕೆಲವು ಶಾಲೆಗಳನ್ನು ನೀಡಿದರು.

ಮಹಾ ಸಭೆಯ ಬೆಳವಣಿಗೆಗೆ ಪಾತ್ರರಾದ 23 ಹಿರಿಯರನ್ನು ಪರಿಚಯಿಸಿ ಗೌರವಿಸಿ ಸನ್ಮಾನಿಸಲಾಯಿತು.

ಮಹಾ ಸಭೆಯ ಅಧ್ಯಕ್ಷರಾದ ಶ್ರೀ ಎಸ್ ರಘುನಾಥ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷರಾದ ಶ್ರೀ ರಾಜಶೇಖರ್ ಜಿ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು.

ಸುಮಾರು 600ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥಾಪನ ದಿನಾಚರಣೆಯನ್ನು ಯಶಸ್ವೀಗೊಳಿಸಿದರು. ಮಹಾ ಸಭೆಯ ಉಪಾಧ್ಯಕ್ಷರು ಜಿಲ್ಲಾ ಪ್ರತಿನಿದಿಗಳು ಸಂಘಟನಾ ಕಾರ್ಯದರ್ಶಿಗಳು ಜಂಟಿ ಕಾರ್ಯದರ್ಶಿಗಳು ಹಾಗೂ ಕಾರ್ಯ ಕಾರಿಣಿ ಸಮಿತಿಯ ಸದಸ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ಮೂಡಿಸಿದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!