
ಮೈಸೂರು ಜಿಲ್ಲೆಯ ಹುಣಸೂರು : ನಂಜನಗೂಡಿನ ಹೆಸರಾಂತ ಕಲಿಗಾಲ ವಾರಪತ್ರಿಕೆಯ ಸಂಪಾದಕರಾದ ದ್ವಾರಕನಾಥ್ ಅವರನ್ನು ಹುಣಸೂರು ರತ್ನಪುರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಸಮಾಜ ಸೇವಕರು ರೈತ ಬಂಧುಗಳು ಡಾಕ್ಟರ್ ಅಬ್ದುಲ್ ಸುಕುರ್ ಗುರುಗಳು ಹಾಗೂ ಮೋಹನ್, ಸನ್ನಿ ಉದ್ಯಮಿಗಳು ಜೊತೆಗೂಡಿ ಪತ್ರಿಕಾ ಸಂಪಾದಕರನ್ನು ಗೌರವಯುತವಾಗಿ ಸನ್ಮಾನಿಸಿದರು.
ನಂತರ ಕಲಿಗಾಲ ಪತ್ರಿಕೆ ಸಂಪಾದಕರು ನಂಜನಗೂಡಿನಲ್ಲಿ ದಿನಾಂಕ 26ರಂದು ನಡೆಯಲಿರುವ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಅಬ್ದುಲ್ ಸುಕುರ್, ಎ ಎಸ್ ಟಿವಿ ಸಂಪಾದಕರು ಅವರನ್ನು ಆಮಂತ್ರಣ ಪತ್ರಿಕೆ ನೀಡುವುದರ ಮೂಲಕ ಆತ್ಮೀಯವಾಗಿ ಆಹ್ವಾನಿಸಿದರು.




















