ಅರಳಿದ ಕುಡ್ಲ ಮಲ್ಲಿಗೆ ಹೂಗಳ ನಡುವಲಿ ಹರಡಿ
ಪುಟ್ಟ ಪುಟ್ಟ ಹಚ್ಚ ಹಸಿರೆಲೆಗಳಲಿ ವೃತ್ತವ ಮಾಡಿ
ಅರ್ಧ ಚಕ್ರಾಕಾರದಿ ಎಕ್ಕಪುಷ್ಪ ಮೊಗ್ಗುಗಳ ಜೋಡಿ
ಶಿರದ ಮೇಲೊಂದು ಲಘು ಕಿರೀಟದ ಮೋಡಿ
ನಲ್ಮುಂಜಾವಲಿ ಮೂಡಿರುವ ಸುಲಲಿತ ಚಿತ್ತಾರವು
ಪದ ಪುಂಜಗಳ ಜೋಡಿಸಲು ಸುಲಲಿತ ಕಾವ್ಯವು
ಸೃಜನಶೀಲ ಸುಮನಗಳಿಗಿದು ಸಮರ್ಪಿತವು
ಬರುತಲಿದೆ ಉಲ್ಲಾಸ ತರಲು ಅನುದಿನವು
- ಲಲಿತಾ ಕೆ ಆಚಾರ್, ಬೆಂಗಳೂರು




















