ಕೊಟ್ಟೂರು : ಕರ್ನಾಟಕ ಮಾದರ ಮಹಾ ಸಭಾ ಈ ಸಂಘಟನೆಯು ಸಮಾಜದ ಹಿತದೃಷ್ಟಿಯನ್ನು ಇಟ್ಟುಕೊಂಡು, ಸಮಾಜದ ಏಳಿಗೆಗಾಗಿ, ಯುವ ಪೀಳಿಗೆಯ ಶ್ರೇಯಸ್ಸಿಗಾಗಿ, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವ ಸಂಘಟನೆ, ಸಮಾಜದ ವಿರುದ್ಧ ನಡೆಯುವ ಕುತಂತ್ರಗಳನ್ನು ತಡೆಯುವ, ಸಮಾಜದ ಸರ್ವತೋಮುಖ ಏಳಿಗೆಯ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಸಂಘಟಿತವಾದದ್ದೆಂದು ಹೇಳಬಹುದು,
ಬೆಂಗಳೂರು ನಗರದಲ್ಲಿ ದಿ. 16-07-2026 ನೇ ಗುರುವಾರ ದಂದು ಆಹಾರ ಮತ್ತು ನಾಗರಿಕ ಸಚಿವರಾದ ಕೆ. ಹೆಚ್. ಮುನಿಯಪ್ಪ ರವರನ್ನು ಕರ್ನಾಟಕ ಮಾದರ ಮಹಾಸಭಾ ( ರಿ.) ದ ರಾಜ್ಯಾಧ್ಯಕ್ಷರು, ಮಹಾಸಭಾದ ಆದೇಶ ಪತ್ರವನ್ನು ಕರ್ನಾಟಕ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕನ್ನಾಕಟ್ಟಿ ಶಿವರಾಜ್ ಇವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಹಾಗೂ
ತಾಲೂಕು ಪದಾಧಿಕಾರಿಗಳ ಆಯ್ಕೆಯ ಪಟ್ಟಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಆಂಜನೇಯ ಕರ್ನಾಟಕ ಮಾದರ ಮಹಾ ಸಭಾದ ರಾಜ್ಯ ಕಾರ್ಯಧರ್ಶಿಗಳು ಹಾಗೂ ಸದ್ರಿ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾಗಿ ನಿಂಬಗಲ್ ರಾಮಕೃಷ್ಣ ಮತ್ತು ಜಿಲ್ಲಾ ಕಾರ್ಯದರ್ಶಿಗಳಾಗಿ ಬದ್ದಿ ಮರಿಸ್ವಾಮಿಯವರು ಹಾಗೂ ಸಂಘಟನೆಯ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















