ಬಳ್ಳಾರಿ / ಕುರುಗೋಡು : ದಮ್ಮೂರು ಗ್ರಾಮದಲ್ಲಿ ಅರೋಗ್ಯ ಇಲಾಖೆ, ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಸ್ಪಂದನ ರಕ್ತನಿಧಿ ಕೇಂದ್ರ ಬಳ್ಳಾರಿ, ಇವರ ಸಹಯೋಗದಲ್ಲಿ ಗ್ರಾಮದ ಸಂಕ್ಲಮ್ಮ ಗುಡಿಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಕೋಳೂರುನ ವೈದ್ಯಾಧಿಕಾರಿಗಳಾದ ಡಾ. ಚಾಮಲಿ ಗುರುಬಸವರಾಜ್ ಮಾತನಾಡಿ, ರಕ್ತವು ಜೀವರಕ್ಷಕವಾಗಿದ್ದು, ರಕ್ತದಾನ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಮೂಲಕ ಮತ್ತೊಬ್ಬರ ಬಾಳಿನ ರಕ್ಷಕರಾಗಬಹುದು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕರಿಬಸವ ಎನ್. ಶರಣಬಸವ,
ಕೆ.ವೀರೇಶ್,
ಶ್ರೀಮತಿ
ರೇಖಾ,ಹೆಚ್. , ಶೈಲಜಾ ಎನ್, ಭರತ್ ಕುಮಾರ್,
ಸ್ಪಂದನ ಬ್ಲಡ್ ಬ್ಯಾಂಕ್ ನ ಡಾ. ಪ್ರಕಾಶ್ ಪಾಟೀಲ್,
ಮಹೇಶ್ ಹೆಚ್,
ಆಶಾ ಕಾರ್ಯಕರ್ತೆ
ಕೆ.ಪರಿಮಳ, ಅಂಗನವಾಡಿ ಕಾರ್ಯಕರ್ತೆಯರಾದ ಸಿಂಧು, ನೇತ್ರಾ,
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗ,
ಊರಿನ ಯುವಕರು ಮುಖಂಡರು, ಹಿರಿಯರು, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















