
ಸಿರುಗುಪ್ಪ : ತೆಕ್ಕಲಕೋಟೆ ಪಟ್ಟಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2025-26ನೇ ಸಾಲಿನ KKRDB ಯೋಜನೆಯ ಅನುದಾನದ ಅಡಿಯಲ್ಲಿ 7. ಕೋಟಿ ರೂಪಾಯಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಮಾಡಿದ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ಎಂ. ನಾಗರಾಜ ಅವರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೋಮಲಿಂಗಪ್ಪ, ಮುಖಂಡರುಗಳಾದ ಮಲ್ಲಿಕಾರ್ಜುನ ಬಾಲಪ್ಪ, ಡಿ. ನಾಗಪ್ಪ, ಬಳೆಗಾರ್ ವೀರೇಶಪ್ಪ, ಶ್ಯಾಮ್ ಸುಂದರ್, ನರೇಂದ್ರ ಸಿಂಹ, ಸುಕಂಪ್ಪ, ಪರಮೇಶ್, ನಸುರುದ್ದೀನ್, ನೀಲಕಂಠ, ರಂಜಾನ್ ಸಲಾಫಿ, ಖಾದರ್ ವಲಿ, ಅಜರುದ್ದೀನ್, ಬಿ. ವೆಂಕಟೇಶ್, ಹೆಚ್. ಗಣೇಶ್, ಪವನ್ ದೇಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ಗೋವಿಂದ, ಸಿರುಗುಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಮಲ್ಲಿಕಾರ್ಜುನ, ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಾದ ಪರಶುರಾಮ್, EE ವೀರಭದ್ರಪ್ಪ, ಸಿರುಗುಪ್ಪ ಮತ್ತು ತೆಕ್ಕಲಕೋಟೆ ವೃತ್ತ ವಲಯ ನಿರೀಕ್ಷಕರು, ಹಾಗೂ ತೆಕ್ಕಲಕೋಟೆ ಪಟ್ಟಣದ ಅನೇಕ ಮುಖಂಡರುಗಳು, ಸಿಬ್ಬಂದಿ ವರ್ಗದವರು, ಮುದ್ದು ಮಕ್ಕಳು, ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್. ಸಿರುಗುಪ್ಪ




















