ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಶರಣರ ಸಂಘಟನೆಯಲ್ಲಿ ಘನಲಿಂಗ ರುದ್ರಮುನಿಯ ಪಾತ್ರ ಬಹಳ ದೊಡ್ಡದು

ಬಸವಕಲ್ಯಾಣ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ ಬಸವಕಲ್ಯಾಣದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತು ಉಪನ್ಯಾಸ ಮಾಲೆಯ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡುತ್ತ ಶಿವಶರಣರ ಸಂಘಟನೆಯ ಇತಿಹಾಸ ಗಮನಿಸಿದಾಗ ರುದ್ರಮುನಿಯವರ ಪಾತ್ರವು ಶರಣರ ಧಾರ್ಮಿಕ ಚಿಂತನೆ ಮತ್ತು ಸಾಮಾಜಿಕ ಜಾಗೃತಿಯನ್ನು ಸಂಘಟಿಸುವಲ್ಲಿ ಮಹತ್ವದ್ದಾಗಿದೆ.
ರುದ್ರಮುನಿಯವರು ಶರಣರ ಚಿಂತನೆಗಳನ್ನು ಕೇವಲ ಆಧ್ಯಾತ್ಮಿಕ ಸಾಧನೆಗೆ ಸೀಮಿತಗೊಳಿಸದೆ ಸಮಾಜದ ಸಾಮಾನ್ಯ ಜನರಿಗೂ ತಲುಪಿಸುವ ಕಾರ್ಯಕ್ಕೆ ಒತ್ತು ನೀಡಿದರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಧಾರ್ಮಿಕ ಮೌಲ್ಯಗಳು ತಲುಪಲಿ ಎಂದು ಮಹಾ ಉದ್ದೇಶದಿಂದ 12ನೇ ಶತಮಾನದಲ್ಲಿಯೇ ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು.
ಶರಣರ ಸಂಘಟನೆ ಎಂದರೆ ಕೇವಲ ಭಕ್ತರ ಸಮೂಹವಲ್ಲ ಅದು ಸಮಾನತೆಯ ಸತ್ಯ ಕಾಯಕ ಮತ್ತು ದಾಸೋಹದ ಮೌಲ್ಯಗಳ ಮೇಲೆ ನಿರ್ಮಾಣವಾದ ಸಾಮಾಜಿಕ ಚಳುವಳಿಯ ಮೂಲಕ ಸಮಾಜವನ್ನು ಸಂಘಟಿಸಿದ್ದು ರುದ್ರಮುನಿಯವರ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು.
ಗವಿಮಠದ ಕಾರ್ಯಾಧ್ಯಕ್ಷರಾದ ಶ್ರೀ ಶರಣಪ್ಪಾ ಬಿರಾದಾರ ಅವರು ವಿಷಯ ಕುರಿತು ಉಪನ್ಯಾಸ ಮಾಲೆಯಲ್ಲಿ ಮಾತನಾಡುತ್ತಾ ಶರಣರ ನಡುವೆ ಏಕತೆ ಮತ್ತು ಪರಸ್ಪರ ಸಹಕಾರ ಬಳಸುವುದು ಧಾರ್ಮಿಕ ವಿಚಾರಗಳನ್ನು ಜನರಿಗೆ ಸರಳವಾಗಿ ತಿಳಿಸುವುದು ಹಾಗೂ ಪಂಚಾಚಾರ್ಯರ ಶರಣರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ. ಗವಿಮಠದ ಸ್ಥಿರ ಆಸ್ತಿ ಮತ್ತು ಚರ ಆಸ್ತಿ ಕುರಿತು ಸರಕಾರದಿಂದ ದಾಖಲೆ ಪಡೆದಿರುವ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪ್ರಸ್ತುತ ಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸವಕಲ್ಯಾಣ ಘಟಕದ ನಿರ್ದೇಶಕರಾದ ಅಶೋಕ ರೆಡ್ಡಿ ಅವರು ಮಾತನಾಡುತ್ತಾ ಪೂಜ್ಯ ಗುರುಗಳ ಸಂಕಲ್ಪ ಬಹಳ ದೊಡ್ಡದು ಪೂಜ್ಯರ ಸರಳತೆ ಮತ್ತು ಅವರ ನಡೆ ನುಡಿ ಒಂದಾಗಿರುವುದು ಬಹಳ ಸಂತೋಷದ ಸಂಗತಿ ಇಂತಹ ಪೂಜ್ಯರು ನಮ್ಮೆಲ್ಲರ ಮಧ್ಯೆ ಇರುವುದೇ ನಮ್ಮ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಅತಿಥಿಯಾಗಿ ಆಗಮಿಸಿದ ಮಾಜಿ ಸೈನಿಕರಾದ ರಾಜಕುಮಾರ ಇರಲೆ ಹಾಗೂ ಸೋಮನಾಥ ರಾಜೋಳೆ ತ್ರಿಪೂರಾಂತ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀಮತಿ ರೇಣುಕಾ ಶಿವಶಂಕರ ರಾಮಣ್ಣನವರ ಅವರು ಪ್ರಾರ್ಥನೆ ಗೀತೆ ಹಾಡಿದರು,ಶ್ರೀ ಬಸವಂತಪ್ಪಾ ಲವಾರೆ ಸ್ವಾಗತಿಸಿದರು, ಮಲ್ಲಿಕಾರ್ಜುನ ಅಲಗುಡೆ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಶೈಲ್ ವಾತಡೆ, ಶಿವಲಿಂಗ ಸ್ವಾಮಿ, ವಿಠ್ಠಲ ರಾಜೋಳೆ,ಸಿದ್ದು ಉಳ್ಳೆ, ಗೋವಿಂದರೆಡ್ಡಿ ಕೊತಂಪಲ್ಲಿ, ಪ್ರೋ.ಸೂರ್ಯಕಾಂತ ಶೀಲವಂತ, ಉಮೇಶ ಶೀಲವಂತ, ಅಭಿಷೇಕ ರಾಮಣ್ಣನವರು, ಶ್ರೀಮತಿ ಸರಸ್ವತಿ ಬೆಂಬಲಗೆ, ಶ್ರೀಮತಿ ಸುರೇಖಾ ಸಜ್ಜನಶೆಟ್ಟಿ, ಸಾಗರ ಮಾಲಗರ, ಪ್ರಶಾಂತ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ಕೊನೆಗೆ ಗವಿಮಠದಿಂದ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!