ಕೊಟ್ಟೂರು: ರಾಜ್ಯದ ಪ್ರತಿಷ್ಠಿತ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎ ದರ್ಜೆಯ ದೇವಾಲಯವಾದ ಪಟ್ಟಣದ ಅರಾದ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ನಿಮಿತ್ಯ ವಿಶೇಷ ಪೂಜೆ ಸಲ್ಲಿಸಿದರು. ಸುಮಂಗಲಿಯರಿಗೆ ಕುಂಕುಮ, ಅರಿಶಿನ, ಬಳೆ ಇತ್ಯಾದಿಗಳನ್ನು ವಿತರಿಸಲಾಯಿತು.
ಆರ್ ಎಂ ಶಿವಪ್ರಕಾಶ್ ಕೊಟ್ಟೂರು ದೇವರು ಸಾನಿಧ್ಯ ವಹಿಸಿದ್ದರು.
ಶೇಖರಯ್ಯ ಪ್ರಧಾನ ಧರ್ಮಕರ್ತರು ಹಾಗೂ ಅರ್ಚಕರು ಪೂಜೆ ಸಲ್ಲಿಸಿದರು, ಭಕ್ತರು ನಸುಕಿನಲ್ಲಿ ಶ್ರೀ ಸ್ವಾಮಿಯ ದರ್ಶನ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೀಪು, ಸುರೇಶ್, ನಾಗರಾಜ್ ಕೊಟ್ರೇಶಿ ಸೇರಿದಂತೆ ದೇವಾಲಯ ಸಿಬ್ಬಂದಿಗಳು ಭಕ್ತರು ಇದ್ದರು.
ವರದಿ: ಕೆ. ಗೋಣೆಪ್ಪ




















