ಹೂ ಕುಂಡದಿ ಬೇಡದ ಗಿಡವೊಂದು ಉದಯಿಸಿತ್ತು
ವಿಲೇವಾರಿ ಮಾಡಲು ಮನದಲಿ ನೋವಿತ್ತು
ಸುಲಲಿತ ತೋಟದಿ ಬಿಂಬಿಸಬೇಕೆನಿಸಿತ್ತು
ಕ್ರಿಯಾಶೀಲ ಚಿಂತನೆಯೊಂದು ಹೊಳೆದಿತ್ತು
ಪುಟ್ಟ ಹಣ್ಣುಗಳ ಜೊತೆಯಲಿ ಜೋಡಿಸಿ
ಕರ್ಬೂಜ ಹಣ್ಣಿನ ಬೀಜಗಳಲಿ ಅಲಂಕರಿಸಿ
ಅರಳಿದ ಚಿತ್ತಾರದ ಸೊಬಗ ಕಾವ್ಯದಿ ಬಣ್ಣಿಸಿ
ರವಾನಿಸುತಿರುವೆ ಶುಭ ಮುಂಜಾವಲಿ ಆನಂದಿಸಿ
- ಲಲಿತಾ ಕೆ ಆಚಾರ್, ಬೆಂಗಳೂರು




















