ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾಳೆ.ದಿ.23 ರಂದು ಮುಗಳಖೋಡದಲ್ಲಿ ವಿಶ್ವ ಜನಪದ ದಿನಾಚರಣೆ- ಜನಪದ ಕಲಾಮೇಳ

ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಾಳೆ ದಿ. 23 ರಂದುಮುಗಳಖೋಡದ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಮಧ್ಯಾಹ್ನ 12 ಗಂಟೆಗೆ ವಿಶ್ವ ಜನಪದ ದಿನಾಚರಣೆ ಹಾಗೂ ಜನಪದ ಕಲಾಮೇಳವು ಜರುಗಲಿದೆ ಎಂದು ಪ್ರತಿಷ್ಠಾನದ ಮುಖಂಡ ಎಲ್. ಶ್ರೀನಿವಾಸ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ವಿಶ್ವ ಜನಪದ ದಿನಾಚರಣೆ ಸಮಾರಂಭದ ಪಾವನ ಸಾನಿಧ್ಯವನ್ನು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ವಹಿಸುವರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್. ಶಾಮಲಾ ಅವರು ಜ್ಯೋತಿಯನ್ನು ಬೆಳಗಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಜನಪದ ಕಲಾವಿದ ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಾದೇವ ಮೀಸಿ. ಮಾಜಿ ಸದಸ್ಯ ಪರಮಾನಂದ ಸುನಗಾರ. ಹಿರಿಯರಾದ ಮಲ್ಲು ಮುಚ್ಚಂಡಿ.
ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಶೈಲ ಪಾಟೀಲ್ ಪಾಲ್ಗೊಳ್ಳುವರು. ಜಮಖಂಡಿ ತಾಲೂಕಿನ ಹುನ್ನೂರಿನ ಬೀಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ. ಮುಧೋಳ ತಾಲೂಕಿನ ಪಿ.ಎಂ.ಬದ್ನಿಯ ಮರಡಿ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹೆಬ್ಬಾಳದ ಮಾಯಕ್ಕ ದೇವಿ ಡೊಳ್ಳಿನ ಗಾಯನ ಸಂಘದವರಿಂದ ಡೊಳ್ಳಿನ ಪದಗಳು ಜರುಗುವವು. ನಂತರ ಕೊಣ್ಣೂರ ಗ್ರಾಮದ ಕರೆಸಿದ್ದೇಶ್ವರ ಗಾಯನ ಸಂಘ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿಯ ಲಕ್ಕವ್ವ ಕಪರಟ್ಟಿ ತಂಡ ಹಾಗೂ ಮುಗಳಖೋಡದ ಶಿವಲಿಂಗವ್ವ ಪೊಲೀಸ್ ತಂಡದವರಿಂದ ತತ್ವಪದಗಳ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದ ಶ್ರೀನಿವಾಸ ಪ್ರಸಾದ್ ಅವರು ಇದೇ ಸಂದರ್ಭದಲ್ಲಿ 162 ನೆಯ ರವಿವಾರದ ಶ್ರೀಸಿದ್ಧಾರೂಢರ ಪಾದುಕಾ ಪಂಚಾಮೃತ ಅಭಿಷೇಕ. ಸಹಸ್ರ ಬಿಲ್ವಾರ್ಚನೆ. ಉಪನ್ಯಾಸ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!