ತೆಕ್ಕಲಕೋಟೆ : ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರದಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವತಿಯಿಂದ ತೆಕ್ಕಲಕೋಟೆ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಹಿನ್ನೆಲೆ, ನಮ್ಮೂರು ನಮ್ಮ ಕೆರೆ, ಶುದ್ಧಗಂಗಾ ಘಟಕ, ಜನಮಂಗಲ ಕಾರ್ಯಕ್ರಮ, ಸುಜ್ಞಾನನಿಧಿ ಶಿಷ್ಯವೇತನ,, ಜನಜಾಗೃತಿ ಕಾರ್ಯಕ್ರಮಗಳು, ಕ್ಷೇತ್ರದ ಸಮಾಜಮುಖಿ ಇತರ ಕಾರ್ಯಗಳ ಬಗ್ಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕಾರ್ಯಕ್ರಮಗಳ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್. ರವರು ಪದಾಧಿಕಾರಿಗಳಿಗೆ ಒಕ್ಕೂಟಗಳ ಮಹತ್ವ, ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿ, ಒಕ್ಕೂಟ ಸಭೆ 3 ತಿಂಗಳಿಗೊಮ್ಮೆ ನಡೆಸುವ ಕುರಿತು,ಯೋಜನೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಕುರಿತು ಮಾತನಾಡಿದರು.
ತರಬೇತಿಯಲ್ಲಿ ತಾಲೂಕು ವಿಚಕ್ಷಣಾಧಿಕಾರಿ ರಾಕೇಶ ಸ್ವ ಸಹಾಯ ಸಂಘಗಳ ಆರ್ಥಿಕ ಶಿಸ್ತಿನ ಬಗ್ಗೆ, ಬಡ್ಡಿದರದ ಬಗ್ಗೆ, ಸಿಬಿಲ್ ವ್ಯವಸ್ಥೆ ಬಗ್ಗೆ, ಪ್ರಗತಿನಿಧಿ ಕಾರ್ಯಕ್ರಮಗಳ ಬಗ್ಗೆ ಬ್ಯಾಂಕ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ವಲಯದ ಮೇಲ್ವಿಚಾರಕಿ ನಾಗವೇಣಿ, ಒಕ್ಕೂಟದ ಅಧ್ಯಕ್ಷರಾದ ರುಕ್ಷಾನಾ, ವೆಂಕಟೇಶ, ರಾಮಾಂಜನೇಯ ಹಾಗೂ ಸೇವಾಪ್ರತಿನಿಧಿಗಳಾದ ಫರಿದಾ ಬಾನು, ರಶೀದಾ, ಶಕುಂತಲಾ, ಹೇಮಾವತಿ ಮತ್ತು ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















