
ನಾನು ಬಂದೆ ಗುಡ್ಡಗಾಡಲ್ಲಿ ಕಾಣಿಸಿಕೊಂಡೆ ಎಂದು ಎಲ್ಲೆಲ್ಲೋ ಗುಲ್ಲೋ ಗುಲ್ಲು.
ಯಾಕೆ ಈ ಥರ ನನಗೆ ಕೊಡುವ ಮರ್ಯಾದೆಯಾ ಅಥವಾ ಭಯವಾ ಇಲ್ಲಾ ಅವಮಾನವಾ ನನಗೆ ಒಂದೂ ತಿಳಿಯದು…
ಈಗ ವಿಷಯಕ್ಕೆ ಬರುವೆ ನಾನು ಅಂದ್ರೆ ಕಾಡಿನ ರಾಜ ಅಂದ್ರೆ “ಹುಲಿ’ ಅಂತ ಪ್ರಾಣಿ ಪ್ರಪಂಚದ ಅಗ್ರ ಪರಭಕ್ಷಕ ಅದರಲ್ಲೂ ನಮ್ಮ ದೇಶದ ರಾಷ್ಟ್ರ ಪ್ರಾಣಿ ಅಂತ ಕರೆಯುವ ನನ್ನನ್ನು ವಿನಾಶದ ಅಂಚಿನಲ್ಲಿಟ್ಟಿದ್ದಾನೆ ಈ ಮಾನವ ಎಂಬ ಕ್ರೂರ ಪ್ರಾಣಿ…..
ಈ ಹಿಂದೆ ಸಮೃದ್ದವಾಗಿದ್ದ ಬೆಟ್ಟ ಗುಡ್ಡ ಕಾಡುಮೇಡಿನಲಿ ಬಲಿಪ್ರಾಣಿಗಳನ ಬೇಟೆಯಾಡಿ ಆರಾಮವಾಗಿದ್ದ ನಮ್ಮನ ಈ ರಾಜ ಮಹಾರಾಜರುಗಳು ಮತ್ತು ಪರದೇಶಿ ದೊರೆಗಳು ಬೇಟೆ ಅನ್ನುವ ತಮ್ಮ ಚಟಕ್ಕೆ ಹವ್ಯಾಸ ಅನ್ನುವ ಪದ ಜೋಡಿಸಿ ನಮ್ಮನ ಅಳಿವಿನ ಅಂಚಿಗೆ ಕರೆದೊಯ್ದರು…..ಈಗಲೂ ಕೂಡ ಸಣ್ಣ ಪುಟ್ಟ ಪುಡಿ ಬೇಟೆಗಾರರ ಕಾಟ ನಮಗೆ ಈ ಭೂಮಿಯ ಮೇಲೆ ಬೇರೆ ಜೀವಿಗಳು ಬದುಕಲು ಯೋಗ್ಯವಾ ಅನಿಸುತ್ತೆ……
ಈ ಆಳುವ ಸರ್ಕಾರಗಳು ನಮಗೆ ಸೀಮಿತ ಪ್ರದೇಶದ ಅಭಯಾರಣ್ಯಗಳನ್ನು ಸೃಷ್ಟಿಸಿ ಕೂಡಿ ಹಾಕಿ ಕರ ವಸೂಲಿ ಮಾಡಿ ಜನರಿಂದ ಅಲ್ಲೂ ಕೂಡ ಕಿಚಾಯಿಸುವ ಕೆಲಸ ಪ್ರಯತ್ನ…
ಯಾವಾಗಲೋ ದಾರಿ ತಪ್ಪಿ ಹಳ್ಳಿಗೆ ಬಂದ್ರೆ ಹಸು ಕರು ತಿಂದ್ರೆ ನಮಗೆ ವಿಷ ಇಲ್ಲ ವಿದ್ಯುತ್ ಕುಣಿಕೆ ಖಾಯಂ…
ನಮಗೂ ಅನಿಸುತ್ತೆ ಯಾಕಾದ್ರು ಹುಲಿಯಾಗಿ ಹುಟ್ಟಿದ್ವೋ ಅಂತ …
ನಮಗೆ ತಂದೆ ತಾಯಿ ಆಸ್ತಿ ಅಂತಸ್ತು ಮಾಡಿ ಕೂಡಿಡೊಲ್ಲ ಜಾತಿ ಧರ್ಮದ ಹಂಗಿಲ್ಲ ನಮ್ಮ ತೋಳ್ಬಲದ ಮೇಲೆನೆ ನಮ್ಮ ಜೀವನ ಹೊಟ್ಟೆ ಹಸಿದ್ರೆ ಮಾತ್ರ ಬೇಟೆ ನಾಳಿನ ಕೂಡಿಡುವ ಚಿಂತೆ ನಮಗಿಲ್ಲ
ಹೊಟ್ಟೆ ತುಂಬಿದ ಮೇಲೆ ಪ್ರಶಾಂತ ನಿದ್ರೆ ನಮ್ಮ ದಿನಚರಿ…
ಮುಂದಿನ ಮಾನವ ಸಂಕುಲ ಬೆಳೆಯಲು ಉಳಿಯಲು ನೀರು ಅತಿಮುಖ್ಯ ನೀರು ಬರಲು ಮಳೆ ಬೇಕು ಮಳೆ ಬರಲು ಕಾಡು ಬೇಕು ಕಾಡಿಗೆ ಪ್ರಾಣಿಗಳು ಬೇಕೆ ಬೇಕು
ಆದ್ದರಿಂದ ಕಾಡಿದ್ರೆ ನಾಡು ಇಲ್ಲಾಂದ್ರೆ ಎಲ್ಲವೂ ಬರಡು ಬರಡು
ಹಾಂ ಸರಿ ಬೇಟೆಯ ಹೊತ್ತಾಯ್ತು ಮತ್ತೆ ಸಿಕ್ತಿನಿ Bye..
( ಇತ್ತೀಚೆಗೆ ಗಂಗಾವತಿಯ ಬೆಟ್ಟದಲಿ ಕಂಡ ಹುಲಿಯ ಕುರಿತ ಮಾರ್ಮಿಕವಾಗಿ ಈ ಒಂದು ಲೇಖನ ದಶಕಗಳ ಹಿಂದೆ ಹಿಂಡು ಹಿಂಡಾಗಿ ಮುಕ್ತವಾಗಿದ್ದ ಹುಲಿ ಎಂಬ ಪ್ರಾಣಿ ವಿನಾಶದ ಅಂಚಿಗೆ ಬಂದ ಪರಿಯ ವಿಶ್ಲೇಷಣೆ.)

ಲೇಖಕರು : ಸಿದ್ದಲಿಂಗಯ್ಯ ಹಿರೇಮಠ.
ಕೊಪ್ಪಳ.
ಮೊಬೈಲ್ : 95911 84811.




















