ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ಗದ್ದೆ ನಾಟಿ ಸಂಭ್ರಮ ಕಾರ್ಯಾಗಾರ

ಮಡಿಕೇರಿ : ರಾಷ್ಟ್ರೀಯ ಶಿಕ್ಷಣ ನೀತಿಯಡಿ ಅಲ್ಲಿನ ಕೌಶಲ್ಯ ಬೋಧ ಕಲಿಕೆಯ ಅಂಗವಾಗಿ ನಗರದ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೊಲಗದ್ದೆಯ ನಾಟಿ ಕಾರ್ಯದ ಅನುಭವವನ್ನು ಕಲ್ಪಿಸಿಕೊಡಲಾಯಿತು.

ಕಗ್ಗೋಡ್ಲು ಗ್ರಾಮದ ನಿಯತಾ ದೇವಯ್ಯ ಸೋಮಣ್ಣ ಅವರ ಗದ್ದೆಯಲ್ಲಿ 7ನೇ ತರಗತಿಯ 70 ವಿದ್ಯಾರ್ಥಿಗಳು, ಶಿಕ್ಷಕರ ತಂಡವು ಭಾಗವಹಿಸಿತ್ತು. ಮಕ್ಕಳು ರೈತರೊಂದಿಗೆ ಗದ್ದೆಗಿಳಿದು ಭತ್ತದ ಸಸಿಗಳನ್ನು ಅಗೆ ತೆಗೆದು ನಾಟಿ ಮಾಡುವುದರ ಮೂಲಕ ಕೃಷಿ ಚಟುವಟಿಕೆಯನ್ನು ಸ್ವಯಂ ಅನುಭವಿಸಿದರು.

ಶಿಕ್ಷಕರು ಮಕ್ಕಳಿಗೆ ಭತ್ತದ ಬೆಳೆ, ನಾಟಿ ವಿಧಾನ, ಗದ್ದೆಯ ಮಹತ್ವ ಮತ್ತು ರೈತರ ಶ್ರಮದ ಬಗ್ಗೆ ಮಾಹಿತಿ ನೀಡಿದರು. ಕೆಸರುಮಯವಾದ ಗದ್ದೆಯಲ್ಲಿ ಮಕ್ಕಳು ಉತ್ಸಾಹದಿಂದ ನಾಟಿ ಮಾಡಿದರು..

ಪುಸ್ತಕದ ಕಲಿಕೆಯ ಜೊತೆಗೆ ಇಂತಹ ಕೌಶಲ್ಯಾಧಾರಿತ ಕಲಿಕೆಯು ಮಕ್ಕಳಲ್ಲಿ ಶ್ರಮದ ಮೌಲ್ಯ, ಆಹಾರದ ಮಹತ್ವ ಮತ್ತು ಕೃಷಿಯ ಬಗ್ಗೆ ಗೌರವ ಮೂಡಿಸುತ್ತದೆ. ಈ ಚಟುವಟಿಕೆಯು ಮಕ್ಕಳಿಗೆ ಅವಿಸ್ಮರಣೀಯ ಅನುಭವವನ್ನು ನೀಡಿತು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!