ಬಳ್ಳಾರಿ : ನಗರದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಮೊಬೈಲ್, ಇಯರ್ ಫೋನ್, 2 ಸಿಮ್ ಕಾರ್ಡ್ ಪತ್ತೆಯಾಗಿವೆ.
ಜೈಲಿನ ಪ್ರಭಾರಿ ಅಧಿಕಾರಿ ಟಿ. ಬಿ. ಭಜಂತ್ರಿ ನೇತೃತ್ವದಲ್ಲಿ ತಪಾಸಣೆ ನಡೆಸಿದ ವೇಳೆ ಜೈಲಿನ 10ನೇ ಬ್ಯಾರಕ್ಷ ಕೊಠಡಿಗಳಲ್ಲಿ ಇವು ಪತ್ತೆಯಾಗಿವೆ. ಪ್ಲಾಸ್ಟಿಕ್ ಕವರ್ ನಲ್ಲಿ ಬಚ್ಚಿಡಲಾಗಿತ್ತು.
ಮಂಡ್ಯ ಮೂಲದ ಖೈದಿಗಳಾದ ಮಂಜು ಅಲಿಯಾಸ್ ಮಾಕಿ ಹಾಗೂ ಅಭಿಷೇಕ್ ಇವರು.ವಿಚಾರಣೆ ವೇಳೆ ಮೊಬೈಲ್ ಬಚ್ಚಿಟ್ಟು ಬಳಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರಂತೆ.
ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಜೈಲಿನೊಳಗೆ ಮೊಬೈಲ್ ಹೇಗೆ ಬಂತು ಅನ್ನೋ ಬಗ್ಗೆ ತನಿಖೆ ನಡೆಸಲಿದ್ದಾರಂತೆ.
ವರದಿ : ಜಿಲಾನಸಾಬ್ ಬಡಿಗೇರ್




















