ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನೆಮಗಳ ಮಾತೃತ್ವದ ಮಡಿಲು ತುಂಬುವ ಸೀಮಂತ ಜನತೆಯ ಪ್ರೀತಿ ಹಾರೈಕೆ ಹಾಗೂ ಹೃದಯ ತುಂಬಿದ ಆಶೀರ್ವಾದದೊಂದಿಗೆ.

ಜನಪರ ಜನ ಸೇವೆ ಮಾಡಿದ ಸರ್ಕಾರಿ ಅಧಿಕಾರಿಗೆ ಸಾರ್ವಜನಿಕರಿಂದ ಸೀಮಂತ.

ತುಮಕೂರು: ಕೊರಟಗೆರೆ ತಾಲ್ಲೂಕಿನಲ್ಲಿ ಜನಪರ ಸೇವೆಯಲ್ಲಿ ಸದಾ ತೊಡಗಿಕೊಂಡು ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ದಕ್ಷ ಜನರ ಪ್ರೀತಿ ಗಳಿಸಿದ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ ಈಗ ತುಮಕೂರಿನ ಉಪ ವಿಭಾಗ ಅಧಿಕಾರಿಯಾಗಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕುಲ ಸಚಿವೆಯಾಗಿ ಸೇವೆ ಸಲ್ಲಿಸುತ್ತಿರುವ ನಹಿದ ಜಮ್ ಜಮ್ ಕೊರಟಗೆರೆ ಜನತೆಯಿಂದ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಯಿತು.

ಇದು ಸರ್ಕಾರಿ ಅಧಿಕಾರಿಗಳು ಒಮ್ಮೆ ಅಧಿಕಾರಕ್ಕೆ ಬಂದರೆ ಸಾರ್ವಜನಿಕರನ್ನು ಗಮನಿಸುವುದೇ ಇಲ್ಲ ಇಂತಹ ಕಾಲದಲ್ಲಿ ಕೊರಟಗೆರೆ ಇಂದ ವರ್ಗಾವಣೆ ಯಾಗಿರುವ ತಹಶೀಲ್ದಾರ್ ಮೇಡಂ ರವರಿಗೆ ತಾಲೂಕಿನ ಪ್ರೀತಿ ಅಕ್ಕರೆ ಸಾರ್ವಜನಿಕರೊಂದಿಗೆ ಇರುವ ಬಾಂಧವ್ಯ ಹಿಂದಿಗೂ ಹಾಗೆ ಇದೆ ಇಂತಹ ಅಪರೂಪದ ಕಾರ್ಯಕ್ರಮ ರಾಜ್ಯದಲ್ಲಿ ವಿಶಿಷ್ಟ ಬೆಳವಣಿಗೆಯಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಹಿದಾ ಮೇಡಂ ತಂದೆ. ಮಗಳು ಸೇವೆ ಸಲ್ಲಿಸಿದ ಕ್ಷೇತ್ರದ ಜನರ ಪ್ರೀತಿ ವಿಶ್ವಾಸಕ್ಕೆ ಹಾಗೂ ನಿಷ್ಪಕ್ಷಪಾತ ಕಾರ್ಯ ವೈಖರಿಯನ್ನು ನೆನೆದು ಇಲ್ಲಿ ಯಾವುದೇ ಜಾತಿ ಇಲ್ಲ ಅವರ ಸೇವೆಗೆ ನನ್ನ ಮಗಳು ಚಿರಋಣಿ ಎಂದು ಭಾವುಕರಾದರು.

ತಾಲೂಕಿನ ತಂದೆ- ತಾಯಿಯರು ಅಣ್ಣತಮ್ಮಂದಿರು, ಅಕ್ಕತಂಗಿಯರು, ಬಂಧು ಬಳಗದವರು, ಆತ್ಮೀಯರು, ಯಾವುದೇ ಜಾತಿ ಭೇದವಿಲ್ಲದೆ ಇಂದು ಮುಸ್ಲಿಂ ಅನ್ನದೆ ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳು ರಾಜಕೀಯ ಮುಖಂಡರು ಪತ್ರಕರ್ತರು, ಸಂಘಟನೆ ಪದಾಧಿಕಾರಿಗಳು ,ಪ್ರಗತಿಪರ ಚಿಂತಕರು, ಕ್ಷೇತ್ರದ ಎಲ್ಲರೂ ಸೇರಿ ಸಾಮಾನ್ಯವಾಗಿ ಕುಟುಂಬದವರು ನೆರವೇರಿಸಬೇಕಾದ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವನ್ನು ಸಾರ್ವಜನಿಕರಿಂದ ನಡೆಸಿ ಕೊಟ್ಟಿದ್ದರಿಂದ ಅವರ ಕುಟುಂಬದವರಿಗೂ, ತಾಯಿ ಮಗುವಿಗೂ ತಾಲೂಕಿನ ಜನತೆ ಶುಭ ಹಾರೈಸಿದರು.

ಸೀಮಂತ ಸಂಭ್ರಮದಲ್ಲಿ ಕೊರಟಗೆರೆ ಜನತೆ ಒಂದಾಗಿ ತಾಯಿ ಮಗುವಿಗೆ ಹಾರೈಸಿ ಮುಂದಿನ ಭವಿಷ್ಯ ಸುಖ ಸಮೃದ್ಧಿ ಸಂತೋಷದಿಂದ ಕೂಡಿರಲಿ ಎಂದು ಆಶೀರ್ವದಿಸಿದರು.

ಪ್ರಸನ್ನ ಕುಮಾರ್ ಎಸ್. ಕೊರಟಗೆರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!