ಕಾರಟಿಗಿ ತಾಲೂಕಿನ ನಾಗನಕಲ್ ಶಾಲೆ ಆವರಣದಲ್ಲಿ ನಡೆದ ತಾಲೂಕ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೂಟದಲ್ಲಿ ಡಣಾಪುರ ಪ್ರೌಢ ಶಾಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವೇಳೆಯಲ್ಲಿ ತಾಲೂಕ ಮಟ್ಟದ ದೈಹಿಕ ಶಿಕ್ಷಣ ಅಧಿಕಾರಿಯಾದ ಸರಸ್ವತಿ ಜೋಡ , ತಾಲೂಕ ಶಿಕ್ಷಕ ಸಂಘದ ಅದ್ಯಕ್ಷರಾದ ಶ್ರೀ ವಿಠ್ಠಲ ಜೀರಗಿಹಾಳ , ಡಣಾಪುರ ದೈಹಿಕ ಶಿಕ್ಷಕರಾದ ಚಂದ್ರಶೇಖರ ಜಾಪಳ , ಬಸವಂತಪ್ಪ ದೈ.ಶಿಕ್ಷಕರ ಅಧ್ಯಕ್ಷರು ಶಿಕ್ಷಕರಾದ ಚನ್ನಬಸಪ್ಪ , ಶರಣಬಸಪ್ಪ ,ಶಿಕ್ಷಕಿಯಾದ ಸುಮಲತ ಸೇರಿದಂತೆ ಮುದ್ದು ಮಕ್ಕಳು ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ




















