ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೌಹಾರ್ದ ಸಹಕಾರಿ ಚಳುವಳಿ ಹಿಂದೆ ಸಾಕಷ್ಟು ಜನರ ಪರಿಶ್ರಮವಿದೆ: ಜಿ.ನಂಜನಗೌಡ್ರು ರಾಜ್ಯಾಧ್ಯಕ್ಷರು

ಕೊಟ್ಟೂರು : ಪಟ್ಟಣದ ಕ್ಷಿತಿಜ ಸೌಹಾರ್ದ ಸಹಕಾರಿಯು 15 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅಭಿನಂದನೆ ಹಾಗೂ 15 ನೇ ವರ್ಷದ ವಾರ್ಷಿಕ ಮಹಾಜನ ಸಭೆಯನ್ನು ಪಟ್ಟಣದ ಶ್ರೀ ರೇಣುಕಾ ಸಭಾಂಗಣದಲ್ಲಿ ಶನಿವಾರ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಷ||ಬ್ರ|| ಶ್ರೀ ಡಾ.ಮಳೆಯೋಗಿ ಶಿವಾಚಾರ್ಯ ಸ್ವಾಮಿಗಳು ಪುರವರ್ಗ ಮಠ ಮಾನಿಹಳ್ಳಿ ಇವರು ಗ್ರಾಹಕರ ಅಭಿನಂದನಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಹಣಕಾಸು ವ್ಯವಹಾರ ಅಂದ ಮೇಲೆ ಸಾಲ ಪಡೆಯುವುದು ವಾಪಸ್ಸು ತೀರಿಸುವುದು ಒಬ್ಬ ಸಂಸ್ಕಾರ ವ್ಯಕ್ತಿಯ ಲಕ್ಷಣ, ಸಾಲದಿಂದ ಮುಕ್ತಿ ಪಡೆಯದಿದ್ದರೆ ಕರ್ಮಗಳು ನಮ್ಮನ್ನು ಎಂದೂ ಬಿಡುವುದಿಲ್ಲ, ಸಮಾಜದಲ್ಲಿ ನಮ್ಮನ್ನು ಕಳ್ಳನಂತೆ ಬಿಂಬಿಸುತ್ತಾರೆ. ಯುವಕರಿಗೆ ಉದ್ಯೋಗ ಬಹಳ ಮುಖ್ಯ, ಸಂಸಾರದಲ್ಲಿ ಸಂಸ್ಕಾರವೂ ಅಷ್ಟೇ ಮುಖ್ಯ, ಸಂಸ್ಥೆಗಳು ನೀವು ಸಾಲ ಪಡೆದು ಮರುಪಾವತಿ ಮಾಡುವುದರ ಮೇಲೆ ಸಂಸ್ಥೆಯ ಬೆಳವಣಿಗೆ ನಿಂತಿರುತ್ತದೆ ಎಂದು ನುಡಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಜಿ.ನಂಜನಗೌಡ್ರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸೌಹಾರ್ದ ಸಹಕಾರಿ ಚಳುವಳಿಗೆ ತನ್ನದೆಯಾದ ಇತಿಹಾಸವನ್ನು ಹೊಂದಿದೆ ಸೌಹಾರ್ದ ಸಹಕಾರಿ ಕಾಯ್ದೆ ರೂವಾರಿ ಎಸ್. ಎಸ್. ಪಾಟೀಲ ಹಾಗೂ ಸಹಕಾರಿ ಪಿತಾಮಹ ಶ್ರೀ ಸಿದ್ದನಗೌಡ ಪಾಟೀಲ ಇಬ್ಬರೂ ಗದಗ ಜಿಲ್ಲೆಯವರೇ ಎನ್ನುವುದು ನಮ್ಮ ಭಾಗದವರಿಗೆ ಹೆಮ್ಮೆಯ ವಿಷಯ. ಕ್ಷಿತಿಜ ಸಹಕಾರಿ ಎಲ್ಲಾ ಸದಸ್ಯರು ಉತ್ತಮ ಸೇವೆ ನೀಡಿ ಈ ಭಾಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಹಣಕಾಸಿನ ವ್ಯವಹಾರ ನಂಬಿಕೆಯಿಂದ ನಡೆಯಬೇಕು ಸಂಸ್ಥೆಯ ಗ್ರಾಹಕರು ತಪ್ಪು ಮಾಡಿದರೆ ನೀವೆ ತಿದ್ದಿ ಹೇಳುವ ಅಧಿಕಾರ ನಿಮಗಿದೆ. ಸಂಸ್ಥೆ ಗುಣಮಟ್ಟದ ಆರ್ಥಿಕ ವ್ಯವಹಾರ ನಡೆಸುತ್ತಿದೆ. ಸಂಸ್ಥೆ ಸಮಾಜಸೇವೆ ಕೂಡ ಮಾಡುತ್ತಿರುವುದು ಹರ್ಷದಾಯಕ ಎಂದು ಹೇಳಿದರು.

ನಿರಂಜನ ಚಟ್ರಿಕಿ ವ್ಯವಸ್ಥಾಪಕರು ಕರ್ನಾಟಕ ಬ್ಯಾಂಕ್ ಕೊಟ್ಟೂರು ಇವರು ಮಾತನಾಡಿ ಸಾಲಗಳು ಸರಿಯಾದ ಕ್ರಮದಲ್ಲಿ ವಸೂಲಿಯಾಗಬೇಕು. ಒಂದು ಸಹಕಾರ ಸಂಸ್ಥೆ 15 ವರ್ಷಗಳನ್ನು ಪೂರೈಸಿದೆ ಎಂದರೆ ಅದರಿಂದ ತುಂಬಾ ಜನರ ಶ್ರಮವಿದೆ ಎಂದರು. ಶಿವರಾಜಕುಮಾರ್ ಬಿ.ಜಿ. ಹಿರಿಯ ವ್ಯವಸ್ಥಾಪಕರು ಕ.ಗ್ರಾಮೀಣ ಬ್ಯಾಂಕ್ ,ಮೋರೆಗೇರೆ ಇವರು ಮಾತನಾಡಿ ಸೈಬರ್ ಕ್ರೈಮ್ ತುಂಬಾ ಚಾಣಾಕ್ಷರಾಗಿರುತ್ತಾರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿಮ್ಮ ಖಾತೆಗಳ ಗುಪ್ತ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು ಇದರಿಂದ ನಿಮ್ಮ ಖಾತೆಯಲ್ಲಿನ ಹಣಕ್ಕೆ ಸೈಬರ್ ಕಳ್ಳರು ಕನ್ನ ಹಾಕುತ್ತಾರೆ ಎಂದರು.

ಓಂಕಾರಗೌಡ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ಅನೇಕರ ಶ್ರಮವಿದೆ ಎಂದರು.

ಮಂಜುನಾಥ ಮೋರಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷಿತಿಜ ಸೌಹಾರ್ದ ಸಹಕಾರಿ ಕಲ್ಪನೆ ನೀಡಿದ್ದು ಸಿ. ಹೆಚ್. ಎಂ. ನಾಗರಾಜ ನಿರುದ್ಯೋಗಿಯಾಗಿದ್ದ ನಮಗೆ ಉದ್ಯೋಗದ ಭರವಸೆ ನೀಡಿ ಸಮಾಜದಲ್ಲಿ ಜನರಿಗೆ ಅರ್ಥಿಕ ಸೇವೆ ಮಾಡಲು ಯೋಜನೆ ರೂಪಿಸಿದವರು. ಈ ಯೋಜನೆಗೆ ಅನೇಕ ಸ್ನೇಹಿತರು ಬೆಂಬಲವಾಗಿ ನಿಂತು ಪಟ್ಟಣದಲ್ಲಿ ಉತ್ತಮ ಹೆಸರನ್ನು ಗಳಿಸಿದೆ. ಸಂಸ್ಥೆಯ ಯಶಸ್ವಿಗೆ ಅನೇಕರ ಶ್ರಮವಿದೆ. ಗ್ರಾಹಕರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಹಗರಿಬೊಮ್ಮನಹಳ್ಳಿ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು 45 ಯುನಿಟ್ ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.

ಶ್ರೀಮತಿ ಜೆ.ಆರ್. ಕಮಲಾ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು, ಎಸ್. ಎಂ. ವೀರೇಶ್ ಲೆಕ್ಕ ಪರಿಶೋಧಕರು, ಹೆಚ್ .ಸುರೇಶ್ ಕ್ಷಿತಿಜ ಸೌಹಾರ್ದ ಸಹಕಾರಿ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿಯ ಎಲ್ಲಾ ಗ್ರಾಹಕರು ಭಾಗವಹಿಸಿದ್ದರು. ಪಿ.ಎಂ.ಈಶ್ವರಯ್ಯ ನಿರೂಪಿಸಿದರು. ಶಿವಮೂರ್ತಿ ಸ್ವಾಮಿಗಳು ಪ್ರಾರ್ಥಿಸಿದರು, ಚನ್ನವೀರಗೌಡ ಎಮ್. ಸಹಕಾರಿ ವ್ಯವಸ್ಥಾಪಕರು ಸ್ವಾಗತಿಸಿದರು.

ವರದಿ: ಕೆ.ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!