ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ದಳವಾಯಿ ಶಾಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಶ್ರದ್ಧಾ ಭಕ್ತಿಗಳಿಂದ ಎಲ್ಲಾ ಶಿಕ್ಷಕರಿಂದ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ನಾಗೇಶ್ ನಾಯಕ್ ಅವರು ಮಾತನಾಡಿ ಎಲ್ಲರಿಗೂ ನನ್ನ ಮಹರ್ಷಿ ವಾಲ್ಮೀಕಿ ಜಯಂತಿಯ ಹಾಗೂ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಕೋರಿದರು. ಇಂದು ಇಡೀ ಭಾರತ ದೇಶ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಕೇವಲ ಒಬ್ಬ ಋಷಿ ಅಲ್ಲ ಜಗತ್ತು ಕಂಡ ಆದಿ ಕವಿ ಎಂದು ಗೌರವದಿಂದ ಕರೆಯುತ್ತಾರೆ ಎಂದರು. ಇವರು ಇಡೀ ಜಗಕ್ಕೆ ಜ್ಞಾನದ ಬೆಳಕನ್ನು ಹರಿಸಿದ ಹರಿಕಾರ. ಪವಿತ್ರ ರಾಮಾಯಣವನ್ನು ಬರೆದ ಶ್ರೇಷ್ಠ ಕವಿಯಾಗಿದ್ದಾರೆ ಎಂದರು.




















