ಕಂಪ್ಲಿ: ಈ ವರ್ಷ ಮಳೆ ಕೊರತೆ ಎದುರಾಗಿರುವುದರಿಂದ ಸಾರ್ವಜನಿಕರು ಕುಡಿಯುವ ಮತ್ತು ಬಳಕೆಯ ನೀರನ್ನು ಅತ್ಯಂತ ಮಿತವ್ಯಯದಿಂದ ಬಳಸಬೇಕು ಹಾಗೂ ನೀರಿನ ತೊಂದರೆಯಾಗದಂತೆ ಪುರಸಭಾ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “2027ರ ಮೇ ತಿಂಗಳವರೆಗೆ, ಅಂದರೆ ಮುಂದಿನ ಮುಂಗಾರು ಮಳೆಯಾಗುವವರೆಗಿನ ಮುಂದಿನ ಎಂಟೊಂಬತ್ತು ತಿಂಗಳುಗಳ ಕಾಲ ಲಭ್ಯವಿರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಾರ್ವಜನಿಕರು ನೀರಿನ ಸದ್ಬಳಕೆಗೆ ಆದ್ಯತೆ ನೀಡಬೇಕು” ಎಂದು ಕೋರಿದ್ದಾರೆ.
ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿ, ಎಲ್ಲೂ ನೀರು ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















