ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸಂಭ್ರಮದ ಕರ್ನಾಟಕ ರಾಜ್ಯೋತ್ಸವದ ಆಚರಣೆ.

ಕೊಪ್ಪಳ : ಕರ್ನಾಟಕ ರಾಜ್ಯ ಈ ಮುಂಚೆ, ಮೈಸೂರು ರಾಜ್ಯವೆಂದು ಕರೆಯಲ್ಪಡುತ್ತಿತ್ತು, ಎಪ್ಪತ್ತರ
ದಶಕದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು 1973ರಲ್ಲಿ, ನವಂಬರ್ ಒಂದನೇ ತಾರೀಖಿನಂದು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಿದರು, ಇದನ್ನು ಅಂದರೆ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಪ್ರದೇಶಗಳನ್ನು ಏಕೀಕೃತ ಗೊಳಿಸಲು, ಏಕೀಕರಣ ಚಳುವಳಿಯನ್ನೇ ಮಾಡಿ, ನವ ಕರ್ನಾಟಕದ ಹರಿಕಾರರಾಗಿ ಅನೇಕ ಮಹನೀಯರು, ಪ್ರಾಣಾರ್ಪಣೆ ಮಾಡಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮದಲ್ಲಿ, ಕನ್ನಡ ಮಾತೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ, ಮತ್ತು ಜ್ಯೋತಿ ಬೆಳಗುವ ಮೂಲಕ ಕಾಲೇಜಿನ ಪ್ರಾಚಾರ್ಯರು,ವೈ. ಬಿ. ಅಂಗಡಿ,ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗಿನ ಸ. ಪ್ರ. ದ ಕಾಲೇಜಿನ ಕನ್ನಡ ವಿಭಾಗ ದ ಪ್ರೊ. ಮಲ್ಲಪ್ಪ ಹೊಸೂರು, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಮುದುಕವ್ವ, ಗಂಜಾಳ್ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾದ ಮಲ್ಲಪ್ಪ, ಭೀಮಪ್ಪ ಕುರಿ, ಹಾಗೂ ಕಾಲೇಜಿನ ಆಂಗ್ಲ ಭಾಷೆಯ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಮೃತ್ಯುಂಜಯ ಹಿರೇಮಠ, ಐಕ್ಯೂಎಸಿ, ಸಂಚಾಲಕರಾದ
ಪ್ರಕಾಶ ಗೌಡರು, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮಂಜುನಾಥ್ ಆರೆಂಟ ನೂರ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ, ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಯಮನೂರಪ್ಪ ಟಿ. ಮತ್ತು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಬಸವರಾಜ, ಡಿ, ಮತ್ತು ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಮಂಜುಳಾ ಮಡಿವಾಳರ, ಮತ್ತು ಕನ್ನಡ ವಿಭಾಗ, ಮತ್ತು ಎಲ್ಲಾ ವಿಭಾಗ ಗಳ ಅತಿಥಿ ಉಪನ್ಯಾಸಕರು, ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದು ವಿಶೇಷ ವಾಗಿತ್ತು
ಕಾರ್ಯಕ್ರಮದ ,ವಿದ್ಯಾರ್ಥಿ ಸರ್ವೇಶ ಕುಕನೂರು, ಅವರ ಪ್ರಾರ್ಥನೆಯೊಂದಿಗೆ, ಆರಂಭವಾಯಿತು, ಸ್ವಾಗತವನ್ನು ಕನ್ನಡ ವಿಭಾಗದ ಡಾ. ಬಾಣದ ಮಂಜುನಾಥ, ಅವರು ನೆರವೇರಿಸಿದರು, ಪ್ರಾಸ್ತಾವಿಕ ನುಡಿಗಳನ್ನು, ಪ್ರೊ. ಯಮನೂರಪ್ಪ ಟಿ. ಅವರು ಮಾತನಾಡುತ್ತ, ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ, ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಪ್ರಧ್ಯಾಪಕ ಮಲ್ಲಪ್ಪ ಹೊಸೂರು ಅವರ ಪರಿಚಯವನ್ನು ಡಾ. ಪ್ರಕಾಶ್ ಬಳ್ಳಾರಿ, ನೆರವೇರಿಸಿಕೊಟ್ಟರೆ, ಕನ್ನಡ ವಿಭಾಗದ ಮತ್ತೋರ್ವ ಉಪನ್ಯಾಸಕರರಾದ ಮ್ಯಾದರಳ್ಳಿ ಸೋಮೇಶ ಅವರು, ಗೀ ಗೀ ಪದಗಳ ಹಾಡುಗಾರ್ತಿ, ಮುದುಕವ್ವ ಮತ್ತು ನಾಟಕ ಕಲಾವಿದರಾದ ಮಲ್ಲಪ್ಪ ಕುರಿ ಅವರನ್ನು ಪರಿಚಯಿಸಿದರು, ಮುದುಕವ್ವ ಗಂಜಾಳ್ ಅವರು ಗೀ ಗೀ ಪದ ಹಾಡುವ ಮೂಲಕ, ನಾಟಕದ ಸಂಭಾಷಣೆ ಹೇಳುವ ಮೂಲಕ ಮಲ್ಲಪ್ಪ ಕುರಿಯವರು ನೆರೆದ ಪ್ರೇಕ್ಷಕರನ್ನು ರಂಜಿಸಿದ್ದು ವಿಶೇಷವೆನಿಸಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಮ್ಲಪ್ಪ ಹೊಸೂರು, ಮಾತನಾಡುತ್ತಾ, ಕನ್ನಡ ನಾಡಿನ ವಿಸ್ತಾರ, ಕನ್ನಡ ಭಾಷೆಯ ಪ್ರಾಚೀನತೆಗೆ ಸಾವಿರಾರು ವರ್ಷ ಗಳ ಇತಿಹಾಸವಿದೆ, ಕನ್ನಡ ಕೇವಲ ಒಂದು ಭಾಷೆ ಯಷ್ಟೇ ಅಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ, ಪರಂಪರೆ ಯನ್ನು ನಿರಂತರ
ಜೀವಂತಿಕೆಯಿಂದ ಇರಿಸುವುದು ಇವತ್ತಿನ ಪ್ರತಿಯೊಬ್ಬರ ಆದ್ಯ ಕರ್ತವ್ಯ ಆಗಬೇಕಿದೆ, ಜನಪದ ಸಾಹಿತ್ಯವೇ ಬೇರು,ಇದನ್ನ ಯಾರೂ ಮರೆಯಬಾರದು, ಎಂದು ಅಭಿಪ್ರಯ ಪಟ್ಟರು.
ವೇದಿಕೆಯಲ್ಲಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಪ್ರೊ. ವೈ. ಬಿ. ಅಂಗಡಿ ಯವರು ಕನ್ನಡ ಭಾಷೆ, ಕನ್ನಡಿಗರಿಗಷ್ಟೇ ಅಲ್ಲ, ಬೇರೆ ಭಾಷೆಯಾಡುವವರಿಗೂ ರೋಮಾಂಚನ ಉಂಟು ಮಾಡುವ ಶಕ್ತಿ ಹೊಂದಿದೆ, ಅಂತಹ ಭಾಷೆಯನ್ನಾಡುವ ನಾವೇ ಧನ್ಯರು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು, ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಕನ್ನಡ ವಿಭಾಗದ ಡಾ. ಮಹಾಂತೇಶ ನೆಲಾಗಣಿ ನಿರೂಪಿಸಿದರು,
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ವಿಭಾಗದ, ಡಾ. ಹನುಮಂತಪ್ಪ ಸಿ. ಬಿ. ಅವರು ನೆರವೇರಿಸಿದರು, ಕನ್ನಡ ವಿಭಾಗದ ಮತ್ತೋರ್ವ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿಯವರ ವಂದನಾರ್ಪಣೆ ಯೊಂದಿಗೆ ಮುಕ್ತಾಯವಾಯಿತು..
ಕಾರ್ಯಕ್ರಮದಲ್ಲಿ ಡಾ. ವಿಪ್ಲವಿ, ಹಂದ್ರಾಳ, ಡಾ. ತುಕಾರಾಮ ನಾಯಕ, ಡಾ. ಮಲ್ಲೇಶ ಛಲವಾದಿ, ಡಾ. ಗಿರಿಜಾ ತುರಮರಿ, ಡಾ. ಬಾಲಾಜಿ, ಸಿಧ್ದಲಿಂಗೇಶ ಹಮ್ಮಿಗಿ, ಡಾ. ಉಮೇಶ ಅಂಗಡಿ ಮತ್ತು ನೂರಾರು ವಿದ್ಯಾರ್ಥಿಗಳು ಮತ್ತು ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!