
ಹುಣಸಗಿ : ಕನ್ನಳ್ಳಿ ಹಾಗೂ ಕನ್ನಳ್ಳಿ ಕ್ಯಾಂಪ್ ಮತ್ತು ಕೂಡಲಗಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಮೊದಲು ದಿನಾಂಕ 30/10/2026 ರಂದು ಮಾನ್ಯ ಅಬಕಾರಿ ಇಲಾಖೆ ಸುರಪುರ ಹಾಗೂ ಮಾನ್ಯ ಆರಕ್ಷಕ ನಿರೀಕ್ಷಕರು ಪೊಲೀಸ್ ಠಾಣಾ ಸುರಪುರ ಇವರಿಗೆ ಮನವಿ ಸಲ್ಲಿಸಲಾಗಿತ್ತು, ಆದರೆ ಮನವಿ ಸಲ್ಲಿಸಿದ ವಿಷಯ ಅಕ್ರಮ ಮದ್ಯ ಮಾರಾಟಗಾರರಿಗೆ ತಿಳಿದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯತನದ ಅಸಡ್ಡೆಯ ನಡೆಯ ವಿರುದ್ದ ಹಾಗೂ ಗ್ರಾಮಕ್ಕೆ ಮದ್ಯ ಸರಬರಾಜು ಮಾಡುವ ವ್ಯಕ್ತಿಯನ್ನು ಪತ್ತೆಹಚ್ಚಿ ಅಧಿಕಾರಿಗಳ ಹಾಗೂ ಮದ್ಯವರ್ತಿಯ ಮತ್ತು ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಮಾನ್ಯ ಜಿಲ್ಲಾಧಿಕಾರಿ ಯಾದಗಿರಿ ಇವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಪ್ರೊಫೆಸರ್ ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ನಿಂಗಣ್ಣ ಗೋನಾಲ್ ಹೇಳಿದರು.
ಈ ಸಂದರ್ಭದಲ್ಲಿ dss ಮುಖಂಡರಾದ HR ಬಡಿಗೇರ್, ರಾಮಪ್ಪ ಕೋರಿ, ನಾಗರಾಜ್ ಓಕಳಿ, ನಿಂಗಪ್ಪ ಕನ್ನಳ್ಳಿ, ಬಸವರಾಜ್ ನಟೆಕಾರ್, ಸುರೇಶ ಹಾದಿಮನಿ, ಸಾಯಬಣ್ಣ ಎಂಟಮನ್,ಸದಾಶಿವ, ಶಿವರಾಜ್ ಗುಡಿಮನಿ ಇನ್ನೂ ಅನೇಕ DSS ಪದಾಧಿಕಾರಿಗಳು ಹಾಗೂ ಮುಖಂಡರು ಭಾಗಿಯಾಗಿದ್ದರು.




















