ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನ ಜನಪರ ವಾಣಿ ಡಿಜಿಟಲ್ ಮಿಡಿಯಾ ಹಾಗೂ ಜನಪರ ವಾಣಿ ಸಾಹಿತ್ಯ ಸೌರಭದ ಸಂಸ್ಥಾಪಕರಾದ ಬಸವರಾಜ ಬಾಗೇವಾಡಿಮಠ ಅವರು ತಮ್ಮ ವೇದಿಕೆ ವತಿಯಿಂದ
ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮೂರ ದೀಪಾವಳಿ
ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು ೪೨ ಕವನಗಳು ಆಯ್ಕೆಯಾಗಿ, ಅಂತಿಮ ಸುತ್ತಿನಲ್ಲಿ ಕಲಬುರಗಿ ಸಾಹಿತಿ ಡಾ|| ಶಿವಕುಮಾರ. ಲಾ. ಸೂರ್ಯವಂಶ ಇವರು ದೀಪಾವಳಿ ಕುರಿತು ರಚಿಸಿದ “ದೀಪದ ಹಬ್ಬ” ಶೀರ್ಷಿಕೆಯ ಕವನವು ತೃತೀಯ ಸ್ಥಾನ ಪಡೆದುಕೊಂಡಿರುವ ಪ್ರಯುಕ್ತ, ಡಾ|| ಶಿವಕುಮಾರ. ಲಾ. ಸೂರ್ಯವಂಶ ಅವರಿಗೆ ಜನಪರವಾಣಿ ವೇದಿಕೆ ವತಿಯಿಂದ ರಾಜ್ಯಮಟ್ಟದ “ಕಾವ್ಯ ಜ್ಯೋತಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಸಾಹಿತ್ಯ ಪ್ರಭೆಗೆ ವೇದಿಕೆ ಸಂಸ್ಥಾಪಕರು ಶುಭ ಹಾರೈಸಿದ್ದಾರೆ.
ಡಾ|| ರಾಮಕೃಷ್ಣ ಶಿರೂರು, ಹಿರಿಯ ಸಾಹಿತಿ ಹಾಗೂ ಶ್ರೀ, ಅ. ಮೃತ್ಯುಂಜಯ, ಸಾಹಿತಿ, ಪಾಂಡವಪುರ ಇವರು ವಿವಿಧ ಜಿಲ್ಲೆಗಳಿಂದ ಬಂದಿರುವ ಎಲ್ಲಾ ಕವನಗಳನ್ನು ವಿಮರ್ಶೆ ಮಾಡಿ ಪಾರದರ್ಶಕವಾದ ತೀರ್ಪನ್ನು ನೀಡಿದ್ದಾರೆ ಎಂದು ಜನಪರವಾಣಿ ವೇದಿಕೆ ಸಂಸ್ಥಾಪಕರಾದ ಶ್ರೀ ಬಿ. ಎಸ್. ಬಾಗೇವಾಡಿಮಠ, ಸಾಹಿತಿ, ರಾಣೇಬೆನ್ನೂರು ಇವರು ತಿಳಿಸಿದ್ದಾರೆ.



















