11 ವಿಭಾಗಗಳ 42 PG ವೈದ್ಯಕೀಯ ಸೀಟುಗಳಿಗೆ NMC ಅನುಮೋದನೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯ ಎಸ್.ಆರ್. ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಎಸ್.ಆರ್. ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸಂಸ್ಥೆಯು 2026–27ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 11 ವಿಭಾಗಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ (PG) ಕೋರ್ಸ್ಗಳನ್ನು ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಅಧಿಕೃತ ಅನುಮೋದನೆ ಪಡೆದುಕೊಂಡಿದೆ., ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನೂತನ ಅನುಮೋದನೆಯೊಂದಿಗೆ ಸಂಸ್ಥೆಗೆ ಒಟ್ಟು 42 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಲಭ್ಯವಾಗಿದ್ದು, ಇದು ಮಹಾವಿದ್ಯಾಲಯದ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಅನುಮೋದನೆ ಪಡೆದ ಸ್ನಾತಕೋತ್ತರ (PG) ಕೋರ್ಸ್ಗಳು ಮತ್ತು ಸೀಟುಗಳ ವಿವರ :
M.D. ಅನಾಟಮಿ: 04 ಸೀಟುಗಳು
M.D. ಫಿಸಿಯಾಲಜಿ: 04 ಸೀಟುಗಳು
M.D. ಬಯೋಕೆಮಿಸ್ಟ್ರಿ: 04 ಸೀಟುಗಳು
M.D. ಫಾರ್ಮಕಾಲಜಿ: 04 ಸೀಟುಗಳು
M.D. ಮೈಕ್ರೋಬಯಾಲಜಿ: 02 ಸೀಟುಗಳು
M.D. ಕಮ್ಯುನಿಟಿ ಮೆಡಿಸಿನ್: 04 ಸೀಟುಗಳು
M.D. ಜನರಲ್ ಮೆಡಿಸಿನ್: 04 ಸೀಟುಗಳು
M.D. ಡರ್ಮಟಾಲಜಿ (ಚರ್ಮ ರೋಗ ವಿಭಾಗ): 04 ಸೀಟುಗಳು
M.S. ಜನರಲ್ ಸರ್ಜರಿ: 04 ಸೀಟುಗಳು
M.D. ರೇಡಿಯಾಲಜಿ: 04 ಸೀಟುಗಳು
M.S. OBG (ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗ): 04 ಸೀಟುಗಳು
ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ರೋಗನಿರ್ಣಯ ಮತ್ತು ಆರೋಗ್ಯ ಸೇವಾ ಸೌಲಭ್ಯಗಳು ಹಾಗೂ ಪರಿಣಿತ ವೈದ್ಯ-ಬೋಧಕ ವರ್ಗದ ನಿರಂತರ ಶ್ರಮದಿಂದ ಸಂಸ್ಥೆಗೆ ಈ ಮನ್ನಣೆ ದೊರೆತಿದೆ. ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ವೈದ್ಯಕೀಯ ಶಿಕ್ಷಣ ತಲುಪಿಸುವಲ್ಲಿ ಮತ್ತು ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಲ್ಲಿ ಈ ಹೊಸ ಕೋರ್ಸ್ಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.



















