
ಇಲಕಲ್ಲ : ಗುಡ್ಡಾಪುರ-ಹಿರೇಕೆರೂರ ಕೆ ಎಸ್ ಆರ್ ಟಿ ಸಿ ಬಸ್ಸು ಇಳಕಲ್ ಬಸ್ ನಿಲ್ದಾಣಕ್ಕೆ ಬಂದ ಕ್ಷಣ ಎಲ್ಲರ ಚಿತ್ತ ಈ ಬಸ್ಸಿನತ್ತಲೇ ಇತ್ತು.
ಬಸ್ಸಿನ ಮುಂಭಾಗದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ
ಕನ್ನಡಮ್ಮ ಭುವನೇಶ್ವರಿಯ ಮೂರ್ತಿ, ಸುತ್ತಲೂ ಅಲಂಕಾರ, ಒಳಗೆ ಪುಸ್ತಕಗಳು,ಕನ್ನಡ, ಕರ್ನಾಟಕದ ಕುರಿತು ಹತ್ತು ಹಲವು ಮಾಹಿತಿಗಳು ಹೀಗೆ ಬಸ್ಸನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡಮಯವಾಗಿ ಮಾಡಿ
ಕನ್ನಡದ ತೇರನ್ನಾಗಿಸಿದ ನಿರ್ವಾಹಕರಾದ ಶಶಿಧರ್ ಬೋಸ್ಲೆ ಹಾಗೂ ಚಾಲಕರಿಗೆ ತಮ್ಮ ಕನ್ನಡಮಯ ಅಲಂಕೃತ ವಾಹನದಿಂದ ಕೆಳಗೆ ಇಳಿದಾಗ ಕಳೆದ ವರ್ಷದ ಹಾಗೆಯೇ ಈ ವರ್ಷವೂ ನೀಲಕಂಠ .ಮ. ಕಾಳಗಿ ನಿವೃತ್ತ ಶಿಕ್ಷಕರು ಇಲಕಲ್ಲ ಇವರು ಗೌರವ ಸನ್ಮಾನ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕರು ಶ್ರೀಯುತ ಎ.ಎಂ. ಮಡಿವಾಳರ ಅವರ ನೇತೃತ್ವದಲ್ಲಿ ಕರುನಾಡ ಕಂದ ಪತ್ರಿಕೆ ಸಂಪಾದಕ ಬಸವರಾಜ ಬಳಿಗಾರ, ಸುದ್ದಿ ಸೇವಕ ಪತ್ರಿಕೆ ಸಂಪಾದಕ ಹನುಮಂತಪ್ಪ ವಡ್ಡರ ,ದತ್ತಾತ್ರೇಯ ಮಲಾರಖಾನ್, ವಿಷ್ಣು ಇಂದರಗಿ, ಶಿಕ್ಷಕರಾದ ಚಿದಾನಂದ ಮತ್ತು ಶ್ರೀಮತಿ ದಾಕ್ಷಾಯಿಣಿ ಕಾಳಗಿ, ಶಿವಯ್ಯ ಹಿರೇಮಠ, ಮುತ್ತಣ್ಣ ನಾಗಶೆಟ್ಟಿ, ಗುರುರಾಜ ದೇಶಪಾಂಡೆ ,ಹನುಮೇಶ ವಡ್ದರ ಮೊದಲಾದವರು ಸೇರಿದಂತೆ ನೂರಾರು ಜನ ಕನ್ನಡಾಭಿಮಾನಿಗಳು ಸೇರಿ ನಿರ್ವಾಹಕರು, ಚಾಲಕರಿಗೆ ಶಾಲನ್ನು ಹಾಕಿ ಅವರ ಕನ್ನಡ ಸೇವೆ, ಶ್ರಮ ಹಾಗೂ ಅವರ ಅಪ್ಪಟ ಕನ್ನಡ ಅಭಿಮಾನಕ್ಕೆ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ವಾಹಕ ಶಶಿಧರ ಬೋಸ್ಲೆ ಅವರು ಬಸ್ ನಲ್ಲಿ ಪ್ರಯಾಣಿಕರಿಗೆ ಓದಲು ಪುಸ್ತಕ, ಕುಡಿಯುವ ನೀರು, ಸಿಹಿ ಹಂಚುವ ಕುರಿತು ಮಾಹಿತಿ ಹಂಚಿಕೊಂಡರು.
ಬಸ್ ನಿಲ್ದಾಣದಲ್ಲಿ ನಿಂತಷ್ಟು ಹೊತ್ತು ನೆರೆದಿದ್ದ ಎಲ್ಲರೂ ಬಸ್ ನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.



















