ಮಹಾರಾಷ್ಟ್ರ : ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ಹಿರಿಯ ಸಾಹಿತಿ ,ಕನ್ನಡಪರ ಹೋರಾಟಗಾರ, ನಿವೃತ್ತ ಶಿಕ್ಷಕ. ಅ.ಬಾ. ಚಿಕ್ಕ ಮಣೂರಯವರು ಅ.ಬಾ. ಗುರೂಜಿ ಹೆಸರಿನಿಂದ ಪ್ರಸಿದ್ಧಿ ಪಡೆದವರು.
78 ಹರೆಯದ ಅ.ಭಾ.ಚಿ ಯವರು ಪಾದರಸದಂತೆ ಸದಾ ಕ್ರಿಯಶೀಲರು ಸತತ 45 ವರುಷಗಳಿಂದ ಕನ್ನಡಕ್ಕಾಗಿ ದುಡಿಯುತ್ತಾ ಬಂದವರು ಕನ್ನಡ ನಾಡು ನುಡಿಗಾಗಿ ಛಲ ತೊಟ್ಟು ನಿಂತವರು ಕನ್ನಡಮ್ಮಳ ಅಭಿವೃದ್ಧಿಗಾಗಿ ನಿರಂತರ ಹೋರಾಟ ಮಾಡಿದವರು.
ಕನ್ನಡಕ್ಕಾಗಿ ನಿಸ್ವಾರ್ಥ ಹೋರಾಟ :
ಅ.ಬಾ. ಚಿ.ಯವರು ತಮ್ಮ ಶಿಕ್ಷಕ ವೃತ್ತಿಯನ್ನು ಬಲು ನಿಸ್ವಾರ್ಥತೆಯಿಂದ ಮಾಡಿದವರು. ಕನ್ನಡ ಮಕ್ಕಳ ಸಲುವಾಗಿ ರಾತ್ರಿ 8ರಿಂದ 12 ಗಂಟೆಯವರೆಗೆ ಹೆಚ್ಚುವರಿ ತರಗತಿ ನಡೆಸುತ್ತಿದ್ದರು ಶಾಲೆಯಲ್ಲಿ ಕನ್ನಡ ಮಕ್ಕಳ ಸಂಖ್ಯೆ ಹೆಚ್ಚಾಗಲು ಪಾಲಕರ ಮಕ್ಕಳ ಮನಸು ಗೆದ್ದು ಗಡಿನಾಡ ಕನ್ನಡ ಜಾಗೃತಿಗಾಗಿ ಹತ್ತು ಹಲವಾರು ಕನ್ನಡ ಕಾರ್ಯಕ್ರಮ ಆಯೋಜನೆ ಹಾಗೂ ಭಾಗವಹಿಸುವುದು ಹೀಗೆ ಕನ್ನಡ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಅಲ್ಲದೇ 1991 ರಿಂದ 2002 ವರೆಗೆ ಮಹಾರಾಷ್ಟ ರಾಜ್ಯ ಪಠ್ಯ ಪುಸ್ತಕ ಮಂಡಳ ಬಾಲ ಭಾರತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಕಲಕೋಟದಲ್ಲಿ ಕನ್ನಡ ನಿತ್ಯ ನಿರಂತರ ಹಸಿರಾಗಿರಲು ಇನ್ನೂ ಸಹ ಕೆಲಸ ಮಾಡುತ್ತಿದ್ದಾರೆ. ಕನ್ನಡಕ್ಕಾಗಿ ಕೈ ಚಾಚಿ ಬಂದವರಿಗೆ ಅತ್ಯುತ್ಸಾಹದಿಂದ ಸೇವೆ ನೀಡುತ್ತಾರೆ. ತಮ್ಮ ಮನೆಯ ಗ್ರಂಥಾಲಯದಿಂದ ನೂರಾರು ಕನ್ನಡ ಪುಸ್ತಕಗಳನ್ನು ಜನ ಸಾಮಾನ್ಯರಿಗೆ ನೀಡಿ ಕನ್ನಡ ಪುಸ್ತಕ ಓದಲು ಪ್ರೇರಣೆ ನೀಡುತ್ತಿದ್ದಾರೆ. ಈ ಮೂಲಕ ಕನ್ನಡ ಓದುಗರ ಸಂಖ್ಯೆ ಹೆಚ್ಚುಸುತ್ತಿದ್ದಾರೆ ಗಡಿ ಭಾಗದ ಜನತೆಯ ಮನೆ ಮನೆಗಳಿಗೆ ಹೋಗಿ ಅವರ ಮನ ಒಲಿಸಿ ಯಾವ ಹಣಕ್ಕಾಗಿ ಆಸೆ ಪಡದೆ ಕನ್ನಡ ಕಲಿಸುವ ಕಾಯ೯ದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಅ.ಭಾ. ಚಿಯ ವರ ನಿರಂತರ ಪರಿಶ್ರಮ ಹಾಗೂ ಹೋರಾಟ ಗಡಿನಾಡಿನ ಕನ್ನಡಿಗರಿಗೆ ಆಶಾಕಿರಣ, ಹೋರಾಟದ ಕಿಚ್ಚು ಹೆಚ್ಚಿದ ಭಾನಾಡಿಗ ಅ.ಬಾ ಚಿಯವರ ಸಾಹಿತ್ಯ ಸೇವೆಯಲ್ಲಿ ಕರುಳಿನ ಕರೆ, ಹೊನ್ನ ಹೂಗಳು ಸೇರಿದಂತೆ ಇನ್ನೂ ಪ್ರಕಟವಾಗದ ಕೆಲವು ಸಂಕಲನಗಳಿವೆ ನಾಡಿನ ಹಾಗೂ ಹೊರನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಇಂತಹ ಕನ್ನಡ ಹೋರಾಟಗಾರರಿಂದ ಕನ್ನಡ ಉಳಿದಿರುವುದು ಮರಾಠಿ ನೆಲದಲ್ಲಿ ಕನ್ನಡ ಜೀವಂತವಾಗಿ ತಮ್ಮ ಉಸಿರಾಗಿ ಇಟ್ಟಿರುವ ಅ – ಭಾ ಚಿ ಯವರಿಗೂ~ ಗಡಿನಾಡು ಕನ್ನಡಿಗರಿಗೆ ಮನದಾಳದಿಂದ ಅಭಿನಂದನೆಗಳು.

- ದಯಾನಂದಎಂ ಪಾಟೀಲ,
ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ.

















